ಮೆಗ್‌ ಲ್ಯಾನಿಂಗ್‌, ರಾಡ್ರಿಗಾಸ್‌ ಫಿಫ್ಟಿ; ಮುಂಬೈ ವಿರುದ್ಧ ಡೆಲ್ಲಿಗೆ 29 ರನ್‌ಗಳ ಗೆಲುವು

Public TV
2 Min Read

ನವದೆಹಲಿ: ಮೆಗ್‌ ಲ್ಯಾನಿಂಗ್‌ (Meg Lanning) ಮತ್ತು ಜೆಮಿಮಾ ರಾಡ್ರಿಗಾಸ್‌ (Jemimah Rodrigues) ಅಮೋಘ ಅರ್ಧಶತಕ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 29 ರನ್‌ಗಳ ಭರ್ಜರಿ ಜಯ ಸಾಧಿಸಿತು.

ದೆಹಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) 4 ವಿಕೆಟ್‌ ನಷ್ಟಕ್ಕೆ 192 ರನ್‌ ಗಳಿಸಿತು. 193 ಸವಾಲಿನ ರನ್‌ ಗುರಿ ಬೆನ್ನತ್ತಿದ ಮುಂಬೈ ತಂಡವು (Mumbai Indians) 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 163 ರನ್‌ ಅಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ

ಟಾಸ್‌ ಗೆದ್ದ ಮುಂಬೈ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಉತ್ತಮ ಶುಭಾರಂಭ ನೀಡಿತು. ಆರಂಭಿಕರಾಗಿ ಫೀಲ್ಡಿಗಿಳಿದ ಮೆಗ್‌ ಲ್ಯಾನಿಂಗ್‌ ಅರ್ಧಶತಕ (53 ರನ್‌, 6 ಫೋರ್‌, 2 ಸಿಕ್ಸ್‌) ಬಾರಿಸಿ ಗಮನ ಸೆಳೆದರು.

ಮತ್ತೆ ಜೆಮಿಮಾ ರಾಡ್ರಿಗಾಸ್‌ ಕೂಡ ಔಟಾಗದೇ (69 ರನ್‌, 8 ಫೋರ್‌, 3 ಸಿಕ್ಸ್‌) ಫಿಫ್ಟಿ ಬಾರಿಸಿ ಮಿಂಚಿದರು. ಇವರ ಜೊತೆಗೆ ಶಫಾಲಿ ವರ್ಮಾ 28, ಆಲಿಸ್ ಕ್ಯಾಪ್ಸಿ 19, ಮರಿಜಾನ್ನೆ ಕಪ್ 11 ರನ್‌ ಸಿಡಿಸಿ ತಂಡದ ಗೆಲುವಿಗೆ ನೆರವಾದರು. ಇದನ್ನೂ ಓದಿ: WPL 2024 – ಆರ್‌ಸಿಬಿಗೆ 23 ರನ್‌ಗಳ ಭರ್ಜರಿ ಜಯ

193 ರನ್‌ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭಿಕ ಆಘಾತ ಎದುರಿಸಿತು. ಬ್ಯಾಟಿಂಗ್‌ ವೈಫಲ್ಯದಿಂದಾಗಿ ಡೆಲ್ಲಿ ವಿರುದ್ಧ ಸೋಲನುಭವಿಸಿತು. ಅಮನ್ಜೋತ್ ಕೌರ್ (42), ಹೇಲಿ ಮ್ಯಾಥ್ಯೂಸ್ (29), ಸಜೀವನ್ ಸಜನ (24 ರನ್‌ ಔಟಾಗದೆ) ಬಿಟ್ಟರೆ ಬೇರೆ ಯಾವ ಬ್ಯಾಟರ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಜೆಸ್ ಜೊನಾಸೆನ್ ಮಿಂಚು
ಡೆಲ್ಲಿ ತಂಡದ ಪರ ಬೌಲರ್‌ ಜೆಸ್ ಜೊನಾಸೆನ್ 3 ವಿಕೆಟ್‌ ಕಿತ್ತು ಮಿಂಚಿದರು. ಸಂಘಟಿತ ಬೌಲಿಂಗ್‌ ನೆರವಿನಿಂದ ಮುಂಬೈ ವಿರುದ್ಧ ಡೆಲ್ಲಿ ಗೆಲುವು ದಾಖಲಿಸಿತು. ಮರಿಜಾನ್ನೆ ಕಪ್ 2 ಹಾಗೂ ಶಿಖಾ ಪಾಂಡೆ, ಟಿಟಾಸ್ ಸಾಧು, ರಾಧಾ ಯಾದವ್ ತಲಾ 1 ಒಂದು ವಿಕೆಟ್‌ ಕಿತ್ತರು. ಇದನ್ನೂ ಓದಿ: ಸ್ಮೃತಿ, ಪೆರ್ರಿ ಸ್ಫೋಟಕ ಫಿಫ್ಟಿ; ಆರ್‌ಸಿಬಿ ಅಬ್ಬರಕ್ಕೆ ಸುಸ್ತಾದ ವಾರಿಯರ್ಸ್ – ಯುಪಿ ಗೆಲುವಿಗೆ 199 ರನ್‌ಗಳ ಗುರಿ

ಅಂಕಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನ
ಮಹಿಳೆಯರ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಅಗ್ರ ಸ್ಥಾನದಲ್ಲಿದೆ. ಮುಂಬೈ ತಂಡ ಎರಡನೇ ಸ್ಥಾನದಲ್ಲೇ ಮುಂದುವರಿದಿದೆ.

Share This Article