ಬಹುಭಾಷಾ ಖ್ಯಾತ ನಟಿಯೋರ್ವರು ಇದೀಗ ಮೂರನೇ ಮದುವೆಯಿಂದಲೂ ವಿಚ್ಛೇದನ ಪಡೆದು ಸುದ್ದಿಯಾಗಿದ್ದಾರೆ. ಮೋಹನ್‌ಲಾಲ್ ಜೊತೆ `ತನ್ಮಾತ್ರ’ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಮಲಯಾಳಂ ನಟಿ ಮೀರಾ ವಸುದೇವನ್ (Meera Vasudevan) ಇದೀಗ ಮೂರನೇ ಪತಿಯಿಂದ ದೂರಾಗಿರುವ ಅಧಿಕೃತ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.
2024ರಲ್ಲಿ ಇವರು ಸಿನಿಮಾಟೋಗ್ರಾಫರ್ ವಿಪಿನ್ ಪುತಿಯಂಕಂ ಜೊತೆ ವಿವಾಹವಾಗಿದ್ದರು. 2025ರಲ್ಲೇ ವಿಚ್ಛೇದನ(Divorce) ಪಡೆದು ಈಗ ಸಿಂಗಲ್ ಆಗಿರುವುದಾಗಿ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಮಾವಾಸ್ಯೆ ಯಾರು? – ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯ್ತು ಒಂದು ಹೇಳಿಕೆ
ಕನ್ನಡ ಹೊರತಾಗಿ ಮಲಯಾಳಂ, ಹಿಂದಿ, ತಮಿಳು, ತೆಲುಗು ಚಿತ್ರದಲ್ಲಿ ನಟಿಸಿದ್ದ ಮೀರಾ ವಸುದೇವನ್ 2005ರಲ್ಲಿ ವಿಶಾಲ್ ಅಗರವಾಲ್ ಎಂಬುವರನ್ನ ಮದುವೆಯಾಗಿದ್ದರು. 2010ರಲ್ಲಿ ಮದುವೆ ಮುರಿದುಬಿತ್ತು. ಬಳಿಕ 2021ರಲ್ಲಿ ಮಲಯಾಳಂ ನಟ ಜಾನ್ ಕೊಕ್ಕೇನ್ ಜೊತೆ ಮೀರಾ ಎರಡನೇ ವಿವಾಹ ಜರುಗಿತ್ತು. ಈ ದಾಂಪತ್ಯದಲ್ಲಿ ಓರ್ವ ಪುತ್ರನಿಗೂ ಜನ್ಮ ನೀಡಿದ್ದ ಮೀರಾ ವಸುದೇವನ್ 2024ರಲ್ಲಿ ವಿಪಿನ್ ಪುತಿಯಂಕಮ್ ಜೊತೆ ಮದುವೆಯಾಗಿದ್ದರು. ಇದೀಗ ಮೂರನೇ ಮದುವೆಯ ಬಂಧನದಿಂದಲೂ ಹೊರ ಬಂದಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ.
ಮೀರಾ ವಸುದೇವನ್ ಆಗಿರುವ ನಾನು ಅಧಿಕೃತವಾಗಿ ಡಿಕ್ಲೇರ್ ಮಾಡುವುದು ಏನೆಂದರೆ, 2025ರಿಂದ ನಾನು ಸಿಂಗಲ್ ಆಗಿದ್ದೇನೆ. ಈಗ ನಾನು ನನ್ನ ಜೀವನದ ಅದ್ಭುತ ಶಾಂತಚಿತ್ತ ಜೀವನವನ್ನ ನಡೆಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

