ಚಾಮನರಾಜನಗರ: ನಾನು, ನನ್ನ ಪತಿ ಹುಟ್ಟಿದಾಗಿನಿಂದಲೂ ಶ್ರೀ ಮಂಜುನಾಥೇಶ್ವರನನ್ನೇ ಪೂಜೆ ಮಾಡ್ತಿದ್ದೀವಿ. ಯಾವುದೇ ಧರ್ಮಕ್ಕೂ ಮತಾಂತರ ಆಗಿಲ್ಲ ಎಂದು ತಮಿಳುನಾಡಿನ (Tamil Nadu) ಸತ್ಯಮಂಗಲಂನ ಚಿಕ್ಕರಸಂಪಾಳ್ಯಂದಲ್ಲಿ ನೆಲೆಸಿರುವ ʻಬುರುಡೆʼ ಚಿನ್ನಯ್ಯನ (Chinnayya) 2ನೇ ಪತ್ನಿ ಮಲ್ಲಿಕಾ ಹೇಳಿದ್ದಾರೆ.
ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿರುವ 2ನೇ ಪತ್ನಿ ಮಲ್ಲಿಕಾ, ಈ ಊರಿಗೆ ಬಂದು 11 ವರ್ಷ ಆಯ್ತು, ಪ್ರಸ್ತುತ ಇರುವ ಮನೆಯಲ್ಲಿ 8 ವರ್ಷಗಳಿಂದ ವಾಸ ಇದ್ದೇವೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಪತಿ ಸುಳ್ಳು ಹೇಳ್ತಿದ್ದಾನೆ, ಇಟ್ಟುಕೊಂಡವಳ ಜೊತೆ ಸಂಸಾರ ಮಾಡಲು ನನ್ನನ್ನು ಓಡಿಸಿದ್ದ: ಅನಾಮಿಕನ ಮೊದಲ ಪತ್ನಿ
ಚಿನ್ನಯ್ಯನ ಅಣ್ಣ ಕೈಸ್ತ ಪಾದ್ರಿ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಪಡಿತರ, ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡ್ತಿದಿದ್ದು ನನ್ನ ಪತಿ ಚಿನ್ನಯ್ಯ. ಅವರು ಯಾವುದೇ ಧರ್ಮಕ್ಕೆ ಮತಾಂತರ ಆಗಿರಲಿಲ್ಲ. ಯಾವುದೇ ಗ್ಯಾಂಗ್ ಬಗ್ಗೆ ಕೂಡ ನನ್ನ ಜೊತೆಗೆ ಒಂದು ದಿನವೂ ಮಾತನಾಡಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ ಹೇಳ್ತಿದ್ರು ಅಂತ ವಿವರಿಸಿದ್ರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ 90% ತನಿಖೆ ಮುಗಿದಿದೆ, ಎನ್‌ಐಎ, ಸಿಬಿಐ ಅಗತ್ಯವಿಲ್ಲ: ರಾಮಲಿಂಗಾ ರೆಡ್ಡಿ
ಧರ್ಮಸ್ಥಳದಲ್ಲಿ ಹಿಂದೆ ಕೆಲಸ ಮಾಡ್ತಿದ್ದ ವೇಳೆ ಯಾವುದೇ ಸಾವಿನ ವಿಚಾರದ ಬಗ್ಗೆಯೂ ನನ್ನ ಜೊತೆಗೆ ಒಂದು ದಿನವೂ ಹೇಳಿಕೊಂಡಿಲ್ಲ. ನಾವು ಕೂಡ ಮಂಜುನಾಥೇಶ್ವರ ಸ್ವಾಮಿಯ ಆರಾಧನೆ ಮಾಡ್ತೀವಿ ಎಂದರಲ್ಲದೇ ನಾನು ಕೂಡ ಧರ್ಮಸ್ಥಳದಲ್ಲಿ ಕ್ಲೀನಿಂಗ್ ಕೆಲಸ ಮಾಡ್ತಿದ್ದೆ. ಧರ್ಮಸ್ಥಳದಿಂದ ಬಂದ ಬಳಿಕ ನಾವಿಲ್ಲಿ ನೆಲೆಸಿದ್ದೇವೆ. ಈಗ ಎಷ್ಟೋ ಜನ ಏನೇನೋ ಮಾತಾಡ್ತಾರೆ. ಆ ದೇವರು ಈ ದೇವರು ಅಂತ ಬೈತಾರೆ. ನಮ್ಮ ಮನೆಯಲ್ಲೂ ಮಂಜುನಾಥೇಶ್ವರನನ್ನೇ ಪೂಜೆ ಮಾಡ್ತೀವಿ. ನಾವು ಹುಟ್ಟಿದಾಗಿನಿಂದಲೂ ಇದೇ ದೇವರನ್ನ ಆರಾಧಿಸುತ್ತಿದ್ದೇವೆ. ಯಾವುದೇ ಧರ್ಮಕ್ಕೂ ಮತಾಂತರ ಆಗಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್