– ಮೊದಲು ಬಳಸುತ್ತಿದ್ದ ಸಿಮ್ ಕಾರ್ಡನ್ನ ಸೋದರ ಸಂಬಂಧಿಗೆ ಕೊಟಿದ್ರಾ ʻಧೂತʼ?
ಬೆಂಗಳೂರು: ಧರ್ಮಸ್ಥಳದ (Dharmasthala) ಬಗ್ಗೆ ಅಪಪ್ರಚಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಎಂ.ಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಹತ್ತು ಹಲವು ವಿಚಾರಗಳು ತನಿಖೆಯಿಂದ ಬಯಲಾಗಿದೆ.
ಈ ನಡುವೆ ಯೂಟ್ಯೂಬರ್ ಎಂ.ಡಿ ಸಮೀರ್ (Sameer MD) ಮುಂದಿನ ಒಂದು ವಾರದ ಒಳಗಾಗಿ ವಾಸ ವಿರುವ ಮನೆ ಖಾಲಿ ಮಾಡಲು ಮಾಲೀಕರ ಅನುಮತಿ ಅನ್ನೋದು ಕಂಡುಬಂದಿದೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪದಲ್ಲಿ ಮೊದಲು ವಾಸವಿದ್ದ ಆರೋಪಿ ಸಮೀರ್ 4 ವರ್ಷದಿಂದ ಬನ್ನೇರುಘಟ್ಟ ಠಾಣಾ (Bannerghatta Police Station) ವ್ಯಾಪ್ತಿಯ ಮನೆಯಲ್ಲಿ ವಾಸವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್
ಆರೋಪಿ ಸಮೀರ್ ಆರಂಭದಲ್ಲಿ ತಾನು ಬಳಸುತ್ತಿದ್ದ ಫೋನ್ ನಂಬರ್ ಸಿಮ್ ಕಾರ್ಡನ್ನ ಅವರ ಕಸಿನ್ ಸಿಸ್ಟರ್‌ಗೆ ಕೊಟ್ಡಿದ್ದಾನೆ. ಧರ್ಮಸ್ಥಳ ಪೊಲೀಸರು ಬೆನ್ನು ಬಿದ್ದಿದ್ದಾರೆಂಬ ವಿಚಾರ ತಿಳಿದ ಆರೋಪಿ ಸಮೀರ್ ತಾನು ಬಳಸುತ್ತಿದ್ದ ನಂಬರ್ ಕಸಿನ್ ಸಿಸ್ಟರ್‌ಗೆ ಕೊಟ್ಟು ತಲೆಮರಿಸಿಕೊಂಡು ಧರ್ಮಸ್ಥಳ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದ ಅನ್ನೋದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸಮೀರ್ ಕಸಿನ್ ಬೆಂಗಳೂರಿನಲ್ಲಿದ್ದ ಲೊಕೆಷನ್ ಬೆಂಗಳೂರಿನಲ್ಲಿ ತೋರಿಸುತ್ತಿದ್ದರಿಂದ ಧರ್ಮಸ್ಥಳ ಪೊಲೀಸರು ನಿನ್ನೆ ಸಮೀರ್ ನನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದು ಮನೆ ಸರ್ಚ್ ಮಾಡಿ ಬರಿಗೈಯಲ್ಲಿ ಹೋಗಿದ್ದರು. ಇದನ್ನೂ ಓದಿ: ಸಮೀರ್‌ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!