ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

By
2 Min Read

ಮಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಎಐ ವಿಡಿಯೋ ಮಾಡಿ ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಯೂಟ್ಯೂಬರ್‌ ಸಮೀರ್‌ (Youtuber Sameer) ಕೊನೆಗೂ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ.

ಬೆಳಗ್ಗೆ 10:30ರ ವೇಳೆಗೆ ವಿಚಾರಣೆಗೆ ಬರುವುದಾಗಿ ಹೇಳಿದ್ದ ಸಮೀರ್‌ ವಕೀಲರೊಂದಿಗೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಹಾಜರಾಗಿದ್ದಾನೆ. ಕೂಲಿಂಗ್‌ ಗ್ಲಾಸ್‌ ಧರಿಸಿದ್ದ ಸಮೀರ್‌ ಮುಗುಳು ನಗೆ ಬೀರುತ್ತಲೇ ವಿಚಾರಣೆಗೆ ಹಾಜರಾಗಿದ್ದಾನೆ. ಇನ್ನೂ ಸಕಲ ತಯಾರಿ ಮಾಡಿಕೊಂಡಿದ್ದ ಎಸ್‌ಐಟಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್ ವಾಹಿನಿಯ ಸಮೀರ್‌ಗೆ ಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಕೋರ್ಟ್ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು.

ದೂತನ ಬಂಡವಾಳ ಬಯಲು
ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ. ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ʻಭೀಮ’ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಅನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.

Share This Article