ನವದೆಹಲಿ: ತೀವ್ರ ಶೀತಗಾಳಿಯಿಂದ ದೆಹಲಿ (Delhi) ತತ್ತರಿಸಿ ಹೋಗಿದೆ. ಇಂದಿನಿಂದ ಎರಡು ದಿನ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದ್ದು, ಕನಿಷ್ಠ ತಾಪಮಾನ 2.9 ಡಿಗ್ರಿಗಿಳಿದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಜ.12 ಹಾಗೂ ಜ.13ರಂದು ತ್ರೀವ ಶೀತಗಾಳಿ ಬೀಸುವ ಸಾಧ್ಯತೆಯಿರುವ ಹಿನ್ನೆಲೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಬೆಳಗಿನ ಜಾವ ಶೀತಗಾಳಿ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: 1947ರ ಬಳಿಕ ಫಸ್ಟ್ ಟೈಮ್ – ಮಕರ ಸಂಕ್ರಾಂತಿಯಂದು ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್
ಸೋಮವಾರ (ಜ.12) ದೆಹಲಿಯಲ್ಲಿ ಕನಿಷ್ಠ 2.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ದೆಹಲಿ ಸೇರಿದಂತೆ ಹರಿಯಾಣ, ಚಂಡೀಗಢದ ಹಲವು ಪ್ರದೇಶಗಳಲ್ಲಿ ಮಂಗಳವಾರ (ಜ.13) ಶೀತಗಾಳಿ ಮುಂದುವರಿಯುವ ನಿರೀಕ್ಷೆಯಿದೆ. ಇನ್ನೂ ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲೂ ಚಳಿ ತೀವ್ರವಾಗಿದೆ.
ಇದೆಲ್ಲದರ ಮಧ್ಯೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಭಾನುವಾರ (ಜ.11) `ಕಳಪೆ’ಯಾಗಿರುವುದು ಕಂಡುಬಂದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 291 ದಾಖಲಾಗಿದೆ. ಜ.12 ರಿಂದ ಜ.14ರವರೆಗೆ ಗಾಳಿಯ ಗುಣಮಟ್ಟ ಕಳಪೆಯಾಗಿರಲಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಮೂರನೇ ಹಂತದಲ್ಲಿ ದೋಷ – PSLV ರಾಕೆಟ್ ಉಡಾವಣೆ ವಿಫಲ

