ಯುವತಿಯ ಹಿಂಬದಿ ಟಚ್‌ ಮಾಡಿ ಅಸಭ್ಯ ವರ್ತನೆ ತೋರಿದ್ದ ಎಂಬಿಎ ಪದವೀಧರ ಅರೆಸ್ಟ್‌

Public TV
1 Min Read

ಬೆಂಗಳೂರು: ನಗರದ ಮಾರತ್ತಹಳ್ಳಿಯಲ್ಲಿ ಯುವತಿಯ (Young Woman) ಜೊತೆಗೆ ಅಸಭ್ಯ ವರ್ತನೆ ತೋರಿದ್ದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.

ಇಲ್ಲಿನ ದೇವರ ಬಿಸನಹಳ್ಳಿ ವಾಸಿಯಾಗಿರೋ ಶ್ರೀಕಾಂತ್ ಬಂಧಿತ ಬೀದಿ ಕಾಮಣ್ಣ. ಕಳೆದ ಏ.30ರಂದು ರಾತ್ರಿ 11:30 ಗಂಟೆ ಸುಮಾರಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿ ಇಕೋ ಸ್ಪೇಸ್‌ನ ಮುಖ್ಯದ್ವಾರದ ಬಳಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿ, ಯುವತಿಯ ಹಿಂಬದಿ ಡಚ್ ಮಾಡಿ ನಂತರ ಅಸಭ್ಯವಾಗಿ ವರ್ತಿಸಿ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಬಾಲಾಕೋಟ್‌ ದಾಳಿಯ ನಂತರ ಶಕ್ತಿಶಾಲಿಯಾದ ಭಾರತ! – ಬತ್ತಳಿಕೆಗೆ ಏನೇನು ಸೇರಿದೆ?

ಈ ವೇಳೆ ಯುವತಿ ಜೋರಾಗಿ ಕೂಗಿಕೊಂಡು ಸಹಾಯಕ್ಕಾಗಿ ಕರೆದಿದ್ದರು. ಆದ್ರೂ ಕೂಡ ಯುವತಿಯ ಸಹಾಯಕ್ಕೆ ಯಾರೋಬ್ಬರೂ ಬಂದಿರಲಿಲ್ಲ ಅಂತ ಆಕೆ ಅಸಮಾಧಾನ ವ್ಯಕ್ತಪಡಿಸಿದ್ಲು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಾರತ್ತಹಳ್ಳಿ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲಿಸಿ, ಅಲ್ಲಿದ್ದ ಸೆಕ್ಯೂರಿಟಿಗಳಿಂದ ಮಾಹಿತಿ ಕಲೆಹಾಕಿದ್ದರು.

ತನಿಖೆ ಮುಂದುವರೆಸಿ ಆರೋಪಿ ಶ್ರೀಕಾಂತ್‌ನನ್ನ ಬಂಧಿಸಿದ್ದಾರೆ. ಆರೋಪಿ ಕೂಡ ಎಂಬಿಎ ಪದವೀಧರನಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 700 ಅಡಿ ಆಳದ ಪ್ರಪಾತಕ್ಕೆ ಬಿದ್ದ ಸೇನಾ ವಾಹನ – ಮೂವರು ಯೋಧರು ಸಾವು 

Share This Article