ಅನೈತಿಕ ಸರ್ಕಾರದಲ್ಲಿ ನೀವು ಪಾಪದ ನೀರಾವರಿ ಮಂತ್ರಿ: ಕಾರಜೋಳ ವಿರುದ್ಧ ಎಂಬಿಪಿ ಕಿಡಿ

Public TV
1 Min Read

ವಿಜಯಪುರ: ಈ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಇದೊಂದು ಪಾಪದ ಕೂಸು, ಅನೈತಿಕ ಸರ್ಕಾರ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ವಿರುದ್ಧ ಕಾಂಗ್ರೆಸ್ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ವಿಜಯಪುರದಲ್ಲಿ ಕಿಡಿಕಾರಿದ್ದಾರೆ.

ನೀರಾವರಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಇದೊಂದು ಪಾಪದ ಕೂಸು, ಅನೈತಿಕ ಸರ್ಕಾರ. ಆ ಪಾಪದ,  ಅನೈತಿಕ ಸರ್ಕಾರದಲ್ಲಿ ನೀವು ಪಾಪದ ನೀರಾವರಿ ಮಂತ್ರಿ ವಾಗ್ದಾಳಿ ನಡೆಸುದ್ದಾರೆ. ಇದನ್ನೂ ಓದಿ:  ಕರಾವಳಿ, ಉತ್ತರ ಒಳನಾಡಿನಲ್ಲಿ ಅ.3ರವರೆಗೆ ಭಾರೀ ಮಳೆ

ಯುಕೆಪಿ ಕಾಂಗ್ರೆಸ್ ಪಕ್ಷದ ಪಾಪಾದ ಕೂಸು ಎಂದು ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಕಾರಜೋಳ ಹೇಳಿಕೆ ನೀಡಿದ್ದರು. ಇದಕ್ಕೆ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ.

ಕಾರಜೋಳ ಅವರು ಚಿಲ್ಲರೆ ಹೇಳಿಕೆ ನೀಡಿದ್ದಾರೆ. ಬಾಯಿ ಚಪಲದಿಂದ ಈ ರೀತಿ ಹೇಳಿಕೆ ಕೊಡೊದು ಅವರ ವಯಸ್ಸಿಗೆ ಸೂಕ್ತ ಅಲ್ಲ ಎಂದು ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *