ಸರ್ಕಾರವೇ ಹಿಜಬ್ ಪ್ರಕರಣ ಮಾಡ್ತಿದೆ: ಎಂ.ಬಿ ಪಾಟೀಲ್

Public TV
2 Min Read

ಬೆಂಗಳೂರು: ಹಿಜಬ್ ವಿವಾದ ಬಿಜೆಪಿ ಸರ್ಕಾರದಿಂದ ಆಗುತ್ತಿದೆ. ರಾಜಕೀಯ ಉದ್ದೇಶಕ್ಕೆ ಇದನ್ನು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಒಂದು ವರ್ಷ ಇದೆ. ಇದಕ್ಕೆ ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಹೀಗೆ ಮಾಡುತ್ತಿದೆ. ಸರ್ಕಾರ ತಪ್ಪು ಮಾಡಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಆದೇಶ ಹೊರಡಿಸುವ ಮೊದಲು ಏನು ನಿಯಮ ಇತ್ತು. ಅದನ್ನು ಮುಂದುವರೆಸಬೇಕು. ಬಿಜೆಪಿಯಿಂದ ಇದು ಸ್ಪಾನ್ಸರ್ ಆಗಿರುವ ಪ್ರಕರಣವಾಗಿದೆ. ಇದು ಕಾಂಗ್ರೆಸ್ ಪ್ರಾಯೋಜಿತ ಅಲ್ಲ, ಇದು ಬಿಜೆಪಿ ಪ್ರಾಯೋಜಿತ ಎಂದು ಟೀಕಿಸಿದರು.

ಗೋವಾ ಪ್ರಣಾಳಿಕೆಗೆ ಕುಮಾರಸ್ವಾಮಿ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಟೀಕೆ ಮಾಡುವವರ ಬಗ್ಗೆ ನಾವು ಮಾತಾಡುವುದಿಲ್ಲ. ಗೋವಾದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 72 ಸಾವಿರ ಕೊಡುವ ಯೋಜನೆಯನ್ನು ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ ಎಂದರು.

ಕಳೆದ ಬಾರಿಯೇ ನಾವು ಸರ್ಕಾರ ರಚನೆ ಮಾಡಬೇಕಿತ್ತು. ಆದರೆ ಬಿಜೆಪಿ ಹಣ ಬಲದಿಂದ ಸರ್ಕಾರ ರಚನೆ ಮಾಡಿದೆ. ಬಿಜೆಪಿ ವಿರುದ್ಧ ಜನರು ಭ್ರಮ ನಿರಸನಾಗಿದ್ದಾರೆ. ಅನೇಕ ಸಮಸ್ಯೆ ಗೋವಾದಲ್ಲಿ ಇದೆ. ಕಾಂಗ್ರೆಸ್ ಗೋವಾದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. 27-30 ಸೀಟು ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಡುವುದು, ತೆಗೆದುಕೊಳ್ಳುವ ಗುಣ ಎರಡು ರಾಜ್ಯದ ನಡುವೆ ಇರಬೇಕು. ಕುಡಿಯುವ ನೀರು ನಮ್ಮ ಹಕ್ಕು. ಈ ಬಗ್ಗೆ ನಾವು ಮಾತುಕತೆ ಮಾಡುತ್ತೇವೆ. ಯಡಿಯೂರಪ್ಪ ಕೊಟ್ಟ ಮಾತನ್ನ ಯಡಿಯೂರಪ್ಪಗೆ ಕೇಳಿ. ನಾವು ಮಾತುಕತೆ ಮೂಲಕ ಸಮಸ್ಯೆ ಪರಿಹಾರ ಮಾಡುತ್ತೇವೆ. ಇಲ್ಲ ಅಂದರೆ ಸುಪ್ರೀಂಕೋರ್ಟ್‍ನಲ್ಲಿ ಹೋರಾಡುತ್ತೇವೆ ಎಂದರು. ಇದನ್ನೂ ಓದಿ: ನೀವು ನನಗೆ ವೋಟು ಹಾಕಲ್ಲ, ಆದ್ರೂ ಕೆಲಸ ಮಾಡಿ ಕೊಡುತ್ತೇನೆ: ಪ್ರೀತಂಗೌಡ

ಸಿಎಂ ಇಬ್ರಾಹಿಂ ಕಾಂಗ್ರೆಸ್ ತ್ಯಜಿಸುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‍ನಿಂದ ಇಬ್ರಾಹಿಂಗೆ ಯಾವುದೇ ಅನ್ಯಾಯ ಆಗಿಲ್ಲ. ಅನೇಕ ಸ್ಥಾನಮಾನ ಕಾಂಗ್ರೆಸ್ ನೀಡಿದೆ. ಎಂಎಲ್ಸಿ ಮಾಡಲಾಗಿದೆ. ಎಂಎಲ್‍ಎ ಟಿಕೆಟ್ ನೀಡಲಾಗಿದೆ. ಅವರು ಯಾರು ಯಾರನ್ನ ಭೇಟಿ ಆಗಿದ್ದಾರೆ ನನಗೆ ಗೊತ್ತಿಲ್ಲ. ಮಿಕ್ಕಿದ್ದು ಇಬ್ರಾಹಿಂಗೆ ಬಿಟ್ಟ ವಿಚಾರವಾಗಿದೆ. ಅವರು ಕಾಂಗ್ರೆಸ್ ಬಿಡುವ ವಿಚಾರ ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರು ಅದನ್ನು ನೋಡಿಕೊಳ್ತಾರೆ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಮ್ಮದು ಕಾಂಗ್ರೆಸ್ ಟೀಂ. ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರ ನೇತೃತ್ವದಲ್ಲಿ ನಾವೆಲ್ಲ ಬಗ್ಗಟ್ಟಾಗಿ ಇದ್ದೇವೆ. ಮತ್ತೆ ಕಾಂಗ್ರೆಸ್ 125 ಕ್ಕೂ ಹೆಚ್ಚು ಸ್ಥಾನ ಪಡೆದು ಜನರಿಗೆ ಸುಭದ್ರ ಸರ್ಕಾರ ನೀಡೋದು ನಮ್ಮ ಗುರಿಯಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸರ್ಕಾರ ರಚನೆ ಮಾಡೋವಾಗ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿ ನಿರ್ಧಾರ ಮಾಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮಹಿಳೆಯಿಂದ ಬ್ಲಾಕ್‍ಮೇಲ್ ಆರೋಪ- ತೇಲ್ಕೂರ್‌ರಿಂದ ವಿವರಣೆ ಕೇಳಿದ ಕಟೀಲ್

ಕೇಂದ್ರದ ನದಿ ಜೋಡಣೆ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ವ್ಯಾಪಕ ಚರ್ಚೆ, ಅಧ್ಯಯನ ಆಗಬೇಕು. ತಜ್ಞರ ತಂಡದಿಂದ ಸಮರ್ಪಕ ಅಧ್ಯಯನ ಆಗಬೇಕು. ಸಾಧಕ-ಬಾಧಕ ಚರ್ಚೆ ಆಗಿ ಜಾರಿ ಆಗಬೇಕು. ಈ ಬಗ್ಗೆ ಸರ್ವ ಪಕ್ಷದ ಸಭೆ ನಡೆಸಿ ತೀರ್ಮಾನ ಮಾಡಬೇಕು. ಇದು ಅಷ್ಟು ಸುಲಭ ಅಲ್ಲ. ಚರ್ಚೆ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *