– ಲಿಂಗಾಯತ ಧರ್ಮ, ವೀರಶೈವ ಅದರ ಒಂದು ಭಾಗ ಎಂದ ಸಚಿವ
– ಭೀಮಾನ ನದಿ ಪ್ರವಾಹ ಪರಿಸ್ಥಿತಿ ಎದುರಿಸುವ ಬಗ್ಗೆ ಸಿಎಂ ಜೊತೆ ಚರ್ಚೆ
ಬೆಂಗಳೂರು: ನಾನು ಬಸವ ಧರ್ಮದ ಪರ ಇರುವವನು, ಧರ್ಮದ ಕಾಲಂ ನಲ್ಲಿ ಲಿಂಗಾಯತ ಧರ್ಮ (Lingayat religion) ಅಂತನೇ ಬರೆಸ್ತೇನೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಬೆಂಗಳೂರಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯದಲ್ಲಿ ಧರ್ಮ ಸಂಘರ್ಷ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಬಸವ ಧರ್ಮದ ಪರ ಇರುವವನು, ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸುತ್ತೇನೆ. ಲಿಂಗಾಯತ ಧರ್ಮ ಆದ್ರೆ ವೀರಶೈವ ಅದರ ಒಂದು ಭಾಗ ಎಂದು ತಿಳಿಸಿದರು.
ಗಡುವಿನೊಳಗೆ ಸಮೀಕ್ಷೆ ಮುಗಿಸಲು ಪ್ರಯತ್ನ
ಜಾತಿ ಸಮೀಕ್ಷೆಯಲ್ಲಿ (Caste Census) ಸಾಕಷ್ಟು ಗೊಂದಲ ವಿಚಾರ ಕುರಿತು ಮಾತನಾಡಿ, ಇನ್ನೆರಡು ದಿನಗಳಲ್ಲಿ ಗೊಂದಲಗಳು ಬಗೆಹರಿಯಲಿವೆ. ಸರ್ವರ್ ಸಮಸ್ಯೆ, ಆ್ಯಪ್ ಸಮಸ್ಯೆ, ಶಿಕ್ಷಕರ ವಿಚಾರ ಎಲ್ಲವೂ ಸರಿ ಹೋಗಲಿದೆ. ಅಗತ್ಯ ಬಿದ್ದರೆ ಸಮಯ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ಮಾಡ್ತೇವೆ. ಆದ್ರೆ ಗಡುವಿನೊಳಗೆ ಸಮೀಕ್ಷೆ ಮುಗಿಸಲು ಪ್ರಯತ್ನ ಪಡ್ತೇವೆ ಎಂದರಲ್ಲದೇ, ಜನ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡ್ತೇವೆ, ಕೋರ್ಟ್ ಕಡ್ಡಾಯ ಅಲ್ಲ ಅಂತ ಹೇಳಿದೆ. ಅದರ ಬಗ್ಗೆ ನಾನು ಮಾತಾಡಲ್ಲ. ಆದ್ರೆ ಜನ ಸಮೀಕ್ಷೆಗೆ ಸಹಕಾರ ಕೊಡಬೇಕು ಎಂದು ಕೋರಿದರು.
ಪ್ರವಾಹ ಪರಿಸ್ಥಿತಿ ಎದುರಿಸುವ ಬಗ್ಗೆ ಸಿಎಂ ಜೊತೆ ಚರ್ಚೆ
ಇನ್ನೂ ಭೀಮಾ ನದಿ ಪ್ರವಾಹ, ಸಮಸ್ಯೆಗಳ ಕುರಿತು ಮಾತನಾಡಿದ ಸಚಿವರು, ಭೀಮಾ ನದಿ ಪ್ರವಾಹದ ದೊಡ್ಡ ಪ್ರಮಾಣದಲ್ಲಿ ಬಂದಿದೆ. 3.5 ಲಕ್ಷ ಕ್ಯೂಸೆಕ್ಸ್ ನೀರು ಬಂದಿದೆ. ಸಿಎಂ, ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಪ್ರವಾಹ ಪರಿಸ್ಥಿತಿ ಎದುರಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಡಿಸಿ, ನೀರಾವರಿ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿರ್ವಹಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಅಗತ್ಯ ಬಂದ್ರೆ ಪ್ರವಾಸ ಮಾಡ್ತೇವೆ. ಒಟ್ಟಾಗಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಿದೆ. ಪ್ರಕೃತಿಯ ಮುಂದೆ ನಾವು ಚಿಕ್ಕವರು, ಜಾಗರೂಕತೆ ವಹಿಸಬೇಕು. ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ, ಬೆಳೆ, ರಸ್ತೆಗಳು ಹಾನಿ ನಷ್ಟದ ಅಂದಾಜು ಇನ್ನೂ ಮಾಡಿಲ್ಲ ಎಂದು ವಿವರಿಸಿದರು.