ವಾಷಿಂಗ್ಟನ್: ರಷ್ಯಾದ ತೈಲ (Russian Oil) ಖರೀದಿಸುವ ದೇಶಗಳ ಮೇಲೆ ಹೊಸ ಸುಂಕ ವಿಧಿಸುವುದನ್ನು ಪರಿಗಣಿಸುವ ಅಗತ್ಯ ಸದ್ಯಕ್ಕಿಲ್ಲ. 2 ಅಥವಾ 3 ವಾರಗಳ ಬಳಿಕ ದ್ವಿತೀಯ ಸುಂಕದ ಬಗ್ಗೆ ಯೋಚಿಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಅಲಾಸ್ಕಾದಲ್ಲಿ ಪುಟಿನ್ (Vladimir Putin) ಮತ್ತು ಟ್ರಂಪ್ ನಡುವಿನ ಮಹತ್ವದ ಸಭೆಯ ಯಾವುದೇ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿತು. ಆದ್ರೆ ಸಭೆಯ ಬಳಿಕ ಮಾಧ್ಯಮವೊಂದರಲ್ಲಿ ಮಾತನಾಡಿದ ಟ್ರಂಪ್, ಹೊಸ ಸುಂಕಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ ಅಂತ ಭಾವಿಸುತ್ತೇನೆ. 2-3 ವಾರಗಳ ನಂತ್ರ ಯೋಚಿಸಬೇಕಾಗುತ್ತೆ, ನಂತರ ಮರುಪರಿಶೀಲಿಸಬೇಕಾಗಬಹುದು ಎಂದಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಕುರಿತು ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತಕ್ಕೆ ಸಿಗುತ್ತಾ ರಿಲೀಫ್?
ಟ್ರಂಪ್ ಎಚ್ಚರಿಕೆ ಬಳಿಕವೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ್ದರಿಂದ ಕಳೆದ ತಿಂಗಳು ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದಾರೆ. ಇದು ಆಗಸ್ಟ್ 27ರಿಂದ ಅನ್ವಯವಾಗಲಿದೆ. ಆದ್ರೆ ಟ್ರಂಪ್ ಅವರ ಹೇಳಿಕೆಯು ಭಾರತದ ಮೇಲಿನ ಸುಂಕದ ಪ್ರಮಾಣ 50 ರಿಂದ 25%ಗೆ ಇಳಿಕೆಯಾಲಿದೆಯೇ ಎಂಬುದನ್ನು ಕಾಡುನೋಡಬೇಕಿದೆ. ಇದನ್ನೂ ಓದಿ: ಉಕ್ರೇನ್ ಜೊತೆಗಿನ ಯುದ್ಧ ಕೊನೆಗೊಳಿಸದ ಹೊರತು ನಮ್ಮ ನಡ್ವೆ ಒಪ್ಪಂದವಿಲ್ಲ – ಪುಟಿನ್‌ಗೆ ಟ್ರಂಪ್ ಸ್ಟ್ರೈಟ್ ಹಿಟ್
50% ಸುಂಕ, ರಷ್ಯಾಗೆ ದೊಡ್ಡ ಹೊಡೆತ ಅಂದಿದ್ದ ಟ್ರಂಪ್
ಅಲಾಸ್ಕ ಸಭೆಯಗೂ ಮುನ್ನ ಮಾತನಾಡಿದ್ದ ಟ್ರಂಪ್, ಭಾರತದ (India) ಮೇಲೆ 50% ಸುಂಕ ವಿಧಿಸಿರುವುದು ರಷ್ಯಾದ (Russia) ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಹೀಗಾಗಿ, ಭಾರತದ ಮೇಲೆ ಅಮೆರಿಕ ಭಾರಿ ಸುಂಕ ವಿಧಿಸಿದೆ. ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಅಮೆರಿಕದ ಸುಂಕ ಹೇರಿಕೆಯಿಂದಾಗಿ ರಷ್ಯಾದ ಆರ್ಥಿಕತೆಯು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಇದರಿಂದ ರಷ್ಯಾ ಮಾತುಕತೆಗೆ ಮುಂದಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತ ಮುಂದುವರಿಸಿದ್ರೆ ಯುದ್ಧದಿಂದ ಹಿಂದೆ ಸರಿಯಲ್ಲ, ಇದು ಮೋದಿ ಸರ್ಕಾರಕ್ಕೆ ಸಂದೇಶ: ಬಿಲಾವಲ್ ಭುಟ್ಟೋ