ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು

1 Min Read

ಬಾಗಲಕೋಟೆ: ಬೀದಿನಾಯಿ (Stray Dog) ಕಚ್ಚಿ ಗಂಭೀರ ಗಾಯಗೊಂಡಿದ್ದ 10 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಅಲೈನಾ ಲೋಕಾಪುರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಡಿಸೆಂಬರ್ 27 ರಂದು ಬಾಗಲಕೋಟೆಯ (Bagalkote) ನವನಗರದ ಸೆಕ್ಟರ್ ನಂ 15 ರಲ್ಲಿ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು. ಬಾಲಕಿಯ ಕಣ್ಣು, ಮೂಗು ಮುಖದ ಮೇಲೆ ಗಂಭೀರ ಗಾಯವಾಗಿದ್ದರಿಂದ ಅಂದೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.  ಇದನ್ನೂ ಓದಿ: ಬೀದಿನಾಯಿಗಳ ಸಮಸ್ಯೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲ – ಸುಪ್ರೀಂ ಅಸಮಾಧಾನ

 

ಆರೋಗ್ಯ ಮತ್ತಷ್ಟು ಹದೆಗೆಟ್ಟಿದ್ದರಿಂದ  ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಅಲೈನಾ ಮೃತಪಟ್ಟಿದ್ದಾಳೆ.

ಬಾಗಲಕೋಟೆಯಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದೆ. ಬೀದಿನಾಯಿ ಹಾವಳಿ ತಡೆಗಟ್ಟುವಲ್ಲಿ ಬಾಗಲಕೋಟೆ ನಗರಸಭೆ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ ಜನರು ಸಿಟ್ಟು ಹಾಕಿದ್ದಾರೆ.

Share This Article