ಧರ್ಮಸ್ಥಳ ಪರ ಧ್ವನಿ ಎತ್ತಿದವ್ರನ್ನ ಹೇಗೆ ಮಟ್ಟಹಾಕಬೇಕೆಂದು ಮಟ್ಟಣ್ಣನವರ್ ಪ್ಲ್ಯಾನ್ ಮಾಡ್ತಿದ್ರು: ಸೂಲಿಬೆಲೆ

Public TV
1 Min Read

– ಗಿರೀಶ್ ಮಟ್ಟಣ್ಣನವರ್ ಒಬ್ಬ ಮಾಸ್ಟರ್ ಮೈಂಡ್

ಬೆಂಗಳೂರು: ಗಿರೀಶ್ ಮಟ್ಟಣ್ಣನವರ (Girish Mattannavar) ಕಥೆಗಳಲ್ಲಿ ಹುರುಳಿರಲಿಲ್ಲ. ಗಿರೀಶ್ ಒಬ್ಬ ಮಾಸ್ಟರ್ ಮೈಂಡ್ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಧರ್ಮಸ್ಥಳದ ಪರವಾಗಿ ಧ್ವನಿ ಎತ್ತಿದವರನ್ನ ಹೇಗೆ ಮಟ್ಟಹಾಕಬೇಕೆಂದು ಗಿರೀಶ್ ಮಟ್ಟಣ್ಣ ಪ್ಲ್ಯಾನ್ ಮಾಡ್ತಿದ್ರು. ಜನರನ್ನ ಹೇಗೆ ಮೋಸ ಮಾಡಬಹುದೆಂದು ತಿಳಿದುಕೊಂಡಿದ್ದರು. 8-10 ವರ್ಷಗಳ ಕಾಲ ತಿಮರೋಡಿ ಫೈಟ್ ಮಾಡುತ್ತಿದ್ದರು. 2023 ಸ್ಯಾಂಡ್ಲಿ ಪ್ರವೇಶ ಆದಾಗ ಅನುಮಾನ ಬಂತು. ಸಮೀರ್ ಪ್ರವೇಶ ಆಯ್ತು, ವಿದೇಶಿ ಪತ್ರಕರ್ತ, ರಾಷ್ಟ್ರ ಮಾಧ್ಯಮಗಳಲ್ಲಿ ಪಸರಿಸುವ ಕೆಲಸ ಆಯ್ತು. ಇದರ ಹಿಂದೆ ಜಿಹಾದಿ ಕೆಲಸ ಮಾಡ್ತಿದೆ. ಕೇರಳದಲ್ಲಿ ಧರ್ಮಸ್ಥಳ ವಿರುದ್ಧ ಮಾಧ್ಯಮಗಳಲ್ಲಿ ಪ್ರಸಾರ ಆಗ್ತಿದೆ ಎಂದರು. ಇದನ್ನೂ ಓದಿ: ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ!

ಧರ್ಮದ ಮೇಲೆ ದಾಳಿ ನಡೆಯುತ್ತಿದೆ, ನಾವೆಲ್ಲರೂ ಒಂದಾಗಬೇಕು. ಸಮೀರ್ ಎಐ ವೀಡಿಯೋ ಬಳಸಿಕೊಂಡು ವೀಡಿಯೋ ಮಾಡಿದ. ಆಗ ಕೆಲವೊಂದು ಸೂಚನೆಗಳನ್ನ ವೀಡಿಯೋ ಆರಂಭಕ್ಕೆ ಮುನ್ನ ಹಾಕಿದ್ರು. ಧರ್ಮಸ್ಥಳದ ನಕಲಿ ದೇವ ಮಾನವ ಅಂತ ಭಾವನೆಗಳ ಮೇಲೆ ಆಟ ಆಡಿದ್ದಾನೆ. ನಿಮ್ಮ ರಕ್ತ ಕುದಿಯುತ್ತಿಲ್ವಾ ಅಂತ ಜನ್ರನ್ನ ಪ್ರಶ್ನೆ ಮಾಡ್ತಾನೆ. ಬಹಳ ಅಪಯಕಾರಿ ಮನಷ್ಯ, ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನೀರಿನಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ʻಚಿನ್ನಯ್ಯʼ – ಮುಸುಕುಧಾರಿಯ ಅಸಲಿಯತ್ತು ಬಯಲು

ಮಾಸ್ಕ್ ಮ್ಯಾನ್ ಇದರ ಹಿಂದೆ ಏನಿದೆ ಅಂತ ಬಿಚ್ಚಿಡ್ತಾನೆ. ಎಸ್‌ಐಟಿ ಅವರು ಕೂಡ ಒಂದಾದ್ರೂ ಬಾಡಿ ಸಿಗ್ಲಿ ಅಂತ ಕಾಯುತ್ತಿದ್ದರು. ಎಸ್‌ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಬಾಯಿ ಬಿಡಿಸಬೇಕಿದೆ. ಇದು ನಿರೀಕ್ಷಿತ, ಆದ್ರೆ ಅದಕ್ಕಿಂತ ಹೆಚ್ಚಿನ ಭರವಸೆಯಿದೆ. ಇದು ಸಮಾಜದ ಶ್ರದ್ಧೆಯ ವಿಚಾರ. ಇದರಲ್ಲಿ ಆಟ ಆಡಬಾರದು ಎಂದು ಹೇಳಿದರು. ಇದನ್ನೂ ಓದಿ: ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೇ ಇದ್ದಾರೆ: ಮಾಸ್ಕ್ ಮ್ಯಾನ್ ಸ್ಫೋಟಕ ಹೇಳಿಕೆ

Share This Article