ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್‌ ಬ್ಯಾಟರ್

Public TV
1 Min Read

ಡಬ್ಲಿನ್‌: ವಿಂಡೀಸ್‌ ಆಟಗಾರ ಮ್ಯಾಥ್ಯೂ ಫೋರ್ಡ್ (Matthew Forde) 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ 10 ವರ್ಷಗಳ ಹಿಂದೆ ಎಬಿ ಡಿ ವಿಲಿಯರ್ಸ್ (AB de Villiers) ಮಾಡಿದ್ದ ವಿಶ್ವದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

ಹೌದು. ಡಬ್ಲಿನ್‌ ಕ್ರೀಡಾಂಗಣದಲ್ಲಿ ಐರ್ಲೆಂಡ್‌ (Ireland) ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿರುವ ವೆಸ್ಟ್‌ ಇಂಡೀಸ್‌ (West Indies) ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿದೆ. ಇದನ್ನೂ ಓದಿ: ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

ಆದ್ರೆ ಈ ಇನ್ನಿಂಗ್ಸ್‌ನಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಫೋರ್ಡ್‌ 16 ಎಸೆತಗಳಲ್ಲಿ 1 ಬೌಂಡರಿ, 8 ಸಿಕ್ಸರ್‌ ಸಹಿತ 50 ರನ್‌ ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ್ದ ಲೆಜೆಂಡ್‌ ಎಬಿ ಡಿ ವಿಲಿಯರ್ಸ್‌ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. 2015ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧವೇ ಡಿವಿಲಿಯರ್ಸ್‌ 16 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ ಸಿಡಿಸಿದ ಸಾಧನೆ ಮಾಡಿದ್ದರು.

ಈ ಪಂದ್ಯದಲ್ಲಿ ಒಟ್ಟು 19 ಎಸೆತಗಳನ್ನು ಎದುರಿಸಿದ ಫೋರ್ಡ್‌ 8 ಸಿಕ್ಸರ್‌, 2 ಬೌಂಡರಿ ಸಹಿತ 58 ರನ್‌ ಚಚ್ಚಿ ಔಟಾದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಏಂಜೆಲೊ ಮ್ಯಾಥ್ಯೂಸ್

ODI ಸ್ಫೋಟಕ ಫಿಫ್ಟಿ ಬಾರಿಸಿದ ಟಾಪ್‌-5 ಬ್ಯಾಟರ್ಸ್‌
* ಎಬಿ ಡಿ ವಿಲಿಯರ್ಸ್‌ – 16 ಎಸೆತ
* ಮ್ಯಾಥ್ಯೂ ಫೋರ್ಡ್ – 16 ಎಸೆತ
* ಸನತ್‌ ಜಯಸೂರ್ಯ – 17 ಎಸೆತ
* ಪೆರೇರಾ – 17 ಎಸೆತ
* ಮಾರ್ಟಿನ್‌ ಗಪ್ಟಿಲ್‌ – 17 ಎಸೆತ

Share This Article