ಕನ್ನಡ ಚಿತ್ರಕ್ಕೆ 30 ಲಕ್ಷ ಸಂಭಾವನೆ: ಶಾನ್ವಿ ಶ್ರೀವಾಸ್ತವ್

Public TV
1 Min Read

ರಭಾಷೆ ನಟಿಯಾಗಿದ್ರೂ ಕನ್ನಡ ಸಿನಿಮಾ, ಭಾಷೆಯ ಮೇಲೆ ಮಾಸ್ಟರ್‌ ಪೀಸ್ (Master Piece Film) ನಟಿ ಶಾನ್ವಿಗೆ ಒಲವಿದೆ. ಸಾಮಾನ್ಯವಾಗಿ ನಟ, ನಟಿಯರು ಸಂಭಾವನೆಯನ್ನು ರಿವೀಲ್ ಮಾಡುವುದಿಲ್ಲ. ಆದರೆ ಸಂದರ್ಶನವೊಂದರಲ್ಲಿ ಸಿನಿಮಾ ಕೆರಿಯರ್, ಸಂಭಾವನೆ ಕುರಿತು ಮುಕ್ತವಾಗಿ ಶಾನ್ವಿ ಶ್ರೀವಾಸ್ತವ್ (Shanvi Srivastava) ಮಾತನಾಡಿದ್ದಾರೆ. ಇದನ್ನೂ ಓದಿ:ಬಹುಭಾಷಾ ನಟ ಪ್ರಭುದೇವ ಅಜ್ಜಿ ನಂಜನಗೂಡಿನಲ್ಲಿ ನಿಧನ

ಕಾಲೇಜು ಪೀಸ್ ಕಟ್ಟಲು ನಾನು ನಟಿಸಲು ಆರಂಭಿಸಿದೆ. ನನ್ನ ಮೊದಲ ಸಂಭಾವನೆ 3 ಲಕ್ಷ ರೂ. ಸಿಕ್ಕಿತ್ತು. ಚಿತ್ರರಂಗಕ್ಕೆ ಬರುವ ಮುನ್ನ ಕೋಚಿಂಗ್ ಸೆಂಟರ್‌ವೊಂದರಲ್ಲಿ ಪಾಠ ಮಾಡುತ್ತಿದ್ದೆ. ತಿಂಗಳಿಗೆ 3,500 ರೂ. ಸಂಬಳ ಪಡೆದುಕೊಂಡಿದ್ದೇನೆ. ಒಂದು ಚಿತ್ರಕ್ಕೆ 3 ಲಕ್ಷ ರೂ. ಎಂದಾಗ ಇಡೀ ಕಾಲೇಜು ಪೀಸ್‌ಗೆ ಆಗುತ್ತದೆಯಲ್ಲ ಎಂದು ನಟಿಸಿದೆ ಎಂದು ಶಾನ್ವಿ ಮಾತನಾಡಿದ್ದಾರೆ.

ಈಗ ಕನ್ನಡದಲ್ಲಿ ಒಂದು ಸಿನಿಮಾಗೆ 30 ಲಕ್ಷ ರೂ. ಸಂಭಾವನೆ ಪಡೆಯುತ್ತೇನೆ. ಮಾರ್ಕೆಟ್ ತಕ್ಕಂತೆ ಸಂಭಾವನೆ ಕೂಡ ಬದಲಾವಣೆಯಾಗುತ್ತದೆ ಎಂದು ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಬೀರ್‌ಬಲ್ 2’ ಸಿನಿಮಾ ಅನೌನ್ಸ್ ಮಾಡಿದ ‘ಘೋಸ್ಟ್’ ನಿರ್ದೇಶಕ ಶ್ರೀನಿ

ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ-2’ನಲ್ಲಿ ಶಾನ್ವಿ ನಾಯಕಿಯಾಗಿದ್ದಾರೆ. ‘ರಂಗಿತರಂಗ’ ನಟ ನಿರೂಪ್, ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

Share This Article