ರಸ್ತೆ ಮಧ್ಯೆ ದೈತ್ಯ ಅಳಿಲುಗಳ ಡಿಶುಂ ಡಿಶುಂ! ವಿಡಿಯೋ ನೋಡಿ

Public TV
1 Min Read

ಬೀಜಿಂಗ್: ಅಳಿಲು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಮುದ್ದಾದ ರೂಪ. ಆಹಾರವನ್ನ ಮುಂಗಾಲಿನಲ್ಲಿ ಹಿಡಿದುಕೊಂಡು ಮೆಲ್ಲುವುದನ್ನ ನೋಡಿದ್ರೆ ಸೋ ಕ್ಯೂಟ್ ಅನ್ನುವಂತಿರುತ್ತೆ. ಆದ್ರೆ ಹೆಗ್ಗಣ ಅಥವಾ ಮುಂಗುಸಿಯಷ್ಟು ದೊಡ್ಡದಾದ ದೈತ್ಯ ಅಳಿಲುಗಳನ್ನ ನೀವೆಲ್ಲಾದ್ರೂ ನೋಡಿದ್ದೀರಾ?

ಇಲ್ಲ ಅಂತಾದ್ರೆ ಈ ವಿಡಿಯೋ ನೋಡಿ. ಎರಡು ದೈತ್ಯ ಅಳಿಲುಗಳು ರಸ್ತೆ ಮಧ್ಯೆ ಕುಸ್ತಿಪಟುಗಳಂತೆ ಕಾದಾಡಿವೆ. ಎರಡೂ ಅಳಿಲುಗಳು ಕೇವಲ ಹಿಂದಿನ ಕಾಲಿನ ಮೇಲೆ ನಿಂತುಕೊಂಡು ಮುಂಗಾಲಿನಿಂದ ಒಂದನ್ನೊಂದು ಹೊಡೆದು ಕುಸ್ತಿ ಮಾಡಿವೆ.

ಚೀನಾದ ಹೈಕ್ಸಿ ಮೊಂಗೊಲ್‍ನಲ್ಲಿ ಈ ಘಟನೆ ನಡೆದಿದ್ದು ಪ್ರತ್ಯಕ್ಷದರ್ಶಿಯೊಬ್ಬರು ಇದನ್ನ ವಿಡಿಯೋ ಮಾಡಿದ್ದಾರೆ. ಆದ್ರೆ ಈ ಅಳಿಲುಗಳ ಜಗಳಕ್ಕೆ ಕಾರಣವಾಗಿದ್ದು ಏನು ಎಂಬುದು ಗೊತ್ತಿಲ್ಲ.

ಅಂದಹಾಗೆ ಈ ದೈತ್ಯ ಅಳಿಲುಗಳನ್ನ ಮಾರ್ಮಟ್ ಅಂತ ಕರೀತಾರೆ. ಇವುಗಳಲ್ಲಿ 15 ವಿವಿಧ ಪ್ರಭೇದಗಳಿವೆ. ಇವು ಸಾಮಾನ್ಯವಾಗಿ ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇವುಗಳ ತೂಕ ಸುಮಾರು 3 ರಿಂದ 7 ಕೆಜಿಯಷ್ಟು ಇರುತ್ತದೆ. ಇವು ಸಂಪೂರ್ಣ ಸಸ್ಯಹಾರಿ ಪ್ರಾಣಿಗಳು.

https://www.youtube.com/watch?v=jXPxKJV6iVw

Share This Article
Leave a Comment

Leave a Reply

Your email address will not be published. Required fields are marked *