ಧಾರಾಕಾರ ಮಳೆ – ಜಮ್ಮು ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ, ರಂಬನ್ ಜಿಲ್ಲೆಯಲ್ಲಿ ಭೂ ಕುಸಿತ

Public TV
1 Min Read

– ಜನಜೀವನ ಅಸ್ತವ್ಯಸ್ತ

ಶ್ರೀನಗರ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಮ್ಮು ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಂಬನ್ (Ramban) ಜಿಲ್ಲೆಯಲ್ಲಿ ಭೂಕುಸಿತ (Landslide) ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಮಕ್ಕಳು, ವೃದ್ಧರು ಮತ್ತು ರೋಗಿಗಳ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್-44ರಲ್ಲಿ ಮಣ್ಣು ಮತ್ತು ಕಲ್ಲುಗಳು ಕುಸಿದಿದೆ. ಗುಡ್ಡ ಕುಸಿತದಿಂದ ಹೆದ್ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಅಗತ್ಯ ವಸ್ತುಗಳ ಪೂರೈಕೆಗೂ ಸಮಸ್ಯೆಯಾಗಿದೆ. ಇದನ್ನೂ ಓದಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ – ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಸಿಎಂ

ಬನಿಹಾಲ್‌ನಲ್ಲಿ 71 ಮಿ.ಮೀ, ಖಾಜಿ ಕುಂಡ್‌ನಲ್ಲಿ 53 ಮಿ.ಮೀ, ಕೊಕರ್‌ನಾಗ್‌ನಲ್ಲಿ 43 ಮಿ.ಮೀ, ಪಹಲ್ಗಾಮ್‌ನಲ್ಲಿ 34 ಮಿ.ಮೀ ಮತ್ತು ಶ್ರೀನಗರದಲ್ಲಿ 12 ಮಿ.ಮೀ. ಮಳೆ ದಾಖಲಾಗಿದೆ. ಶ್ರೀನಗರದ ದಕ್ಷಿಣ ಪ್ರದೇಶದಲ್ಲಿ 80-100 ಮಿ.ಮೀ ಮಳೆಯಾಗಿದೆ. ರಂಬನ್ ಮತ್ತು ಬನಿಹಾಲ್ ನಡುವಿನ ಹಲವೆಡೆ ಭೂಕುಸಿತ ಉಂಟಾಗಿದ್ದು, ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಭದ್ರತೆಯ ದೃಷ್ಟಿಯಿಂದ ಉಧಮ್‌ಪುರದಿಂದ ಶ್ರೀನಗರಕ್ಕೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕಾಗುಣಿತ ತಪ್ಪಾಗಿರೋದಕ್ಕೆ ತಹಶೀಲ್ದಾರ್‌ಗೆ ನೋಟಿಸ್

Share This Article