ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಗೋಡೌನ್‌ಗೆ ಬೆಂಕಿ – ಸುಟ್ಟು ಹೋಯ್ತು 30ಕ್ಕೂ ಹೆಚ್ಚು ಆಟೋಗಳು

Public TV
1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ (Bengaluru) ಮತ್ತೊಂದು ಭಾರಿ ಬೆಂಕಿ ಅವಘಡ (Fire Accident) ಸಂಭವಿಸಿದೆ. ನಾಯಂಡಹಳ್ಳಿಯ ಗಂಗೋಂಡನಹಳ್ಳಿಯಲ್ಲಿದ್ದ ಪ್ಲಾಸ್ಟಿಕ್ ಗೋಡೌನ್ (Plastic Godown) ಹೊತ್ತಿ ಉರಿದಿದೆ.

ಬೆಂಕಿಯ ತೀವ್ರತೆಗೆ ಮೂವತ್ತಕ್ಕೂ ಹೆಚ್ಚು ಆಟೋಗಳು, ಸರಕುಗಳನ್ನು ಸಾಗಿಸುವ ವಾಹನಗಳು ಸುಟ್ಟು ಹೋಗಿದೆ. ಅಕ್ಕಪಕ್ಕದ ಗೋಡೌನ್‌ಗಳಿಗೂ ಬೆಂಕಿ ಆವರಿಸುವ ಸಾಧ್ಯತೆ ಇದ್ದ ಕಾರಣ ಸುಮಾರು ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿವೆ.  ಇದನ್ನೂ ಓದಿ: ಬೆಂಕಿ ಹಚ್ಚುತ್ತೇನೆಂದು ಅನ್ಯಕೋಮಿನ ಯುವಕನಿಂದ ಬೆದರಿಕೆ; ಮೈಸೂರು-ಅಯೋಧ್ಯೆ ರೈಲು 2 ಗಂಟೆ ಸ್ಥಗಿತ!

ರಿಜ್ವಾನ್ ಮಾಲೀಕತ್ವದ ಗೋಡೌನ್‌ನ ಒಂದು ಭಾಗದ ಖಾಲಿ ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಇದರಿಂದಾಗಿ ವಾಹನಗಳು ಸುಟ್ಟು ಹೋಗಿವೆ. ಅಕ್ಕಪಕ್ಕದಲ್ಲೂ ಹತ್ತಾರು ಪ್ಲಾಸ್ಟಿಕ್ ಗೋಡೌನ್ ಇದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಚುರುಕಿನ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

Share This Article