ಮಾರುತಿಗೆ ಬಂಪರ್‌ – ನಿವ್ವಳ ಲಾಭ 4 ಪಟ್ಟು ಏರಿಕೆ, ಇನ್ನೂ 4.12 ಲಕ್ಷ ವಾಹನಗಳ ಆರ್ಡರ್‌ ಬಾಕಿ

Public TV
1 Min Read

ನವದೆಹಲಿ: ಸೆಪ್ಟೆಂಬರ್‌ಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕದಲ್ಲಿ(Q2 Results) ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಕಂಪನಿಯ(Maruti Suzuki) ನಿವ್ವಳ ಲಾಭ 4 ಪಟ್ಟು ಹೆಚ್ಚಳವಾಗಿದೆ.

ಕಳೆದ ವರ್ಷ ಈ ಅವಧಿಯಲ್ಲಿ 475.3 ಕೋಟಿ ರೂ. ನಿವ್ವಳ ಲಾಭ(Net Profit) ದಾಖಲಿಸಿದರೆ ಈ ಹಣಕಾಸು ವರ್ಷದಲ್ಲಿ 2,061 ಕೋಟಿ ರೂ. ಲಾಭ ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.46 ರಷ್ಟು ಏರಿಕೆಯಾಗಿ 29,931 ಕೋಟಿ ರೂ. ಆದಾಯ ದಾಖಲಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ 487 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಮಾರುತಿ ಕಂಪನಿಯಿಂದ ಷೇರು ಪೇಟೆಗೆ ಈ ಮಾಹಿತಿ ಸಿಗುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಷೇರು ಮೌಲ್ಯ ಶೇ.5 ರಷ್ಟು ಏರಿಕೆಯಾಗಿದೆ. ಷೇರು ಮೌಲ್ಯ ಒಂದೇ ದಿನ 506.65 ರೂ. ಏರಿಕೆಯಾಗಿದ್ದು ದಿನದ ಅಂತ್ಯಕ್ಕೆ ಒಂದು ಷೇರು ಬೆಲೆ 9,548 ರೂ.ನಲ್ಲಿ ಕೊನೆಯಾಗಿದೆ. ಇದನ್ನೂ ಓದಿ: ಏರ್‌ಬಸ್‌ ಜೊತೆಗೂಡಿ ವಾಯುಸೇನೆಗೆ ವಿಮಾನ ತಯಾರಿಸಲಿದೆ ಟಾಟಾ ಸಮೂಹ

ಈ ಅವಧಿಯಲ್ಲಿ 5.17 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.36ರಷ್ಟು ಬೆಳವಣಿಗೆ ಸಾಧಿಸಿದೆ. ಈ ಪೈಕಿ ದೇಶದಲ್ಲಿ 4.54 ಲಕ್ಷ, ವಿದೇಶಕ್ಕೆ 63,195 ಕಾರುಗಳನ್ನು ಮಾರಾಟ ಮಾಡಲಾಗಿದೆ. ತ್ರೈಮಾಸಿಕ ಒಂದರರಲ್ಲಿ ಆಗಿರುವ ಗರಿಷ್ಠ ಮಾರಾಟ ಇದಾಗಿದೆ.

ಎಲೆಕ್ಟ್ರಾನಿಕ್‌ ಬಿಡಿಭಾಗಗಳ ಕೊರತೆಯಿಂದಾಗಿ ಸುಮಾರು 35 ಸಾವಿರ ವಾಹನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿದೆ.

ಈ ತ್ರೈಮಾಸಿಕದ ಅಂತ್ಯಕ್ಕೆ ಸುಮಾರು 4.12 ಲಕ್ಷ ವಾಹನಗಳ ಆರ್ಡರ್‌ ಬಾಕಿ ಉಳಿದಿವೆ. ಈ ಪೈಕಿ 1.3 ಲಕ್ಷ ವಾಹನಗಳ ಬುಕ್ಕಿಂಗ್‌ಗಳು ಇತ್ತೀಚಿಗೆ ಬಿಡುಗಡೆ ಮಾಡಲಾದ ಮಾದರಿಗಳಿಗೆ ಬಂದಿದೆ ಎಂದು ತಿಳಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *