ಮಾರುತಿ ಸುಜುಕಿ ಕಾರ್ ಗ್ರಾಹಕರಿಗೆ ಬೇಸಿಗೆ ಬಂಪರ್ ಆಫರ್

Public TV
1 Min Read

ನವದೆಹಲಿ: ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಬೇಸಿಗೆಗೆ ಬಂಪರ್ ಆಫರ್ ನೀಡಿದೆ. ದೇಶದಲ್ಲಿರುವ ತನ್ನ ಎಲ್ಲ ಸರ್ವಿಸ್ ಸೆಂಟರ್ ಗಳಲ್ಲಿ ಮಾರುತಿ ಸುಜುಕಿ ಸಮ್ಮರ್ ರೆಡಿ ವೆಹಿಕಲ್ ಹೆಲ್ತ್ ಚೆಕ್ ಕ್ಯಾಂಪ್ ಆರಂಭಿಸಿದೆ.

ಈ ಬಾರಿ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಈ ಉಚಿತ ಸೇವೆ ನೀಡಲಿದೆ. ಈ ಕ್ಯಾಂಪ್ ನಲ್ಲಿ ಮಾರುತಿ ಸುಜುಕಿ ಕಾರ್ ಖರೀದಿಸಿದ ಗ್ರಾಹಕರು ತಮ್ಮ ಸಮೀಪದ ಸರ್ವಿಸ್ ಸೆಂಟರ್‍ನಲ್ಲಿ ವಾಹನವನ್ನು ಉಚಿತ ಸರ್ವಿಸ್ ಮಾಡಿಸಿಕೊಳ್ಳಬಹುದು. ಈ ಆಫರ್ ಏಪ್ರಿಲ್ 30ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.

ಮಾರುತಿ ಸುಜುಕಿ ದೇಶಾದ್ಯಂತ 2 ಸಾವಿರಕ್ಕೂ ಅಧಿಕ ಸರ್ವಿಸ್ ಸೆಂಟರ್ ಗಳನ್ನು ಹೊಂದಿದೆ. ಈ ಬೇಸಿಗೆ ಕ್ಯಾಂಪ್ ನಲ್ಲಿ ಉಚಿತವಾಗಿ ಪರಿಶೀಲನೆ ಮಾಡಲಾಗುತ್ತದೆ. ಏರ್ ಕಂಡೀಷನರ್, ಟೈರ್, ಬ್ಯಾಟರಿ, ಆಯಿಲ್ ಮತ್ತು ಇಲೆಕ್ಟ್ರಿಕಲ್ ಸಿಸ್ಟಮ್ ಸಹ ಚೆಕ್ ಮಾಡಲಾಗುತ್ತದೆ. ಕಂಪನಿಯಿಂದ ನೇಮಕಗೊಂಡ ನುರಿತ ತಂತ್ರಜ್ಞನರು ವಾಹನಗಳನ್ನು ಚೆಕ್ ಮಾಡಲಿದ್ದಾರೆ.

ಮಾರುತಿ ಸುಜುಕಿ ಪ್ರಕಾರ, ಪ್ರತಿನಿತ್ಯ 50 ಸಾವಿರ ವಾಹನಗಳ ಸರ್ವಿಸ್ ನಡೆಸಲಾಗುತ್ತದೆ. ಬೇಸಿಗೆ ಕಾಲವಾಗಿದ್ದರಿಂದ ಎಸಿ ಮತ್ತು ಇಲೆಕ್ಟ್ರಿಕಲ್ ಸಿಸ್ಟಮ್ ಗಳನ್ನು ಪ್ರಮುಖವಾಗಿ ಚೆಕ್ ಮಾಡಲಾಗುತ್ತದೆ. 2018ರ ಸಮ್ಮರ್ ಫಿಟ್ ವೆಹಿಕಲ್ ಚಕಪ್ ಮೂಲಕ ಸುಮಾರು 2.2 ಲಕ್ಷ ಗ್ರಾಹಕರು ಲಾಭ ಪಡೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *