ಮಾರಾಟದಲ್ಲಿ ಆಲ್ಟೋವನ್ನೇ ಹಿಂದಿಕ್ಕಿ, ದಾಖಲೆ ಬರೆದ ಡಿಸೈರ್ ಕಾರು

Public TV
1 Min Read

ನವದೆಹಲಿ: ಭಾರತದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಸೆಡಾನ್ ಡಿಸೈರ್ ಕಾರು ಮಾರಾಟದಲ್ಲಿ ಹ್ಯಾಚ್‍ಬ್ಯಾಕ್ ಮಾದರಿಯ ಆಲ್ಟೋವನ್ನು ಹಿಂದಿಕ್ಕಿದೆ.

ಮಧ್ಯಮವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಉತ್ತಮ ಬೆಲೆಯಲ್ಲಿ ಗುಣಮಟ್ಟದ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಆದರೆ ಹ್ಯಾಚ್‍ಬ್ಯಾಕ್ ಮಾದರಿಯಾದ ಆಲ್ಟೋ ಕಾರನ್ನು ಹಿಂದಿಕ್ಕಿ ಮಧ್ಯಮ ಸೆಡಾನ್ ಮಾದರಿ ಡಿಸೈರ್ ದಾಖಲೆ ನಿರ್ಮಿಸಿದೆ.

ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) 2018ರ ಏಪ್ರಿಲ್ ನಿಂದ ನವೆಂಬರ್ ತಿಂಗಳವರೆಗಿನ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ವರದಿಗಳ ಪ್ರಕಾರ ಈ ಅವಧಿಯಲ್ಲಿ ಆಲ್ಟೋ ಕಾರು 1,53,303 ಮಾರಾಟವಾಗಿದ್ದರೆ, ಡಿಸೈರ್ ಕಾರು 1,82,139 ಯೂನಿಟ್‍ಗಳನ್ನು ಮಾರಾಟ ವಾಗಿದೆ.

ಆಲ್ಟೋ ಕಾರು ಮಾರುತಿ ಸುಜುಕಿ ಕಂಪನಿಯಲ್ಲೇ ಅತಿ ಹೆಚ್ಚು ಮಾರಾಟವಾಗುವ ಕಾರು ಎಂದು ಹೆಸರು ಪಡೆದುಕೊಂಡು ಬಂದಿತ್ತು. ಅಲ್ಲದೇ ಕಳೆದ ವರ್ಷವೂ ಸಹ 1,69,343 ಆಲ್ಟೋ ಕಾರುಗಳನ್ನು ಸಂಸ್ಥೆ ಮಾರಾಟ ಮಾಡಿತ್ತು. ಆದರೆ ಈಗ ಇದೇ ಮಾರುತಿಯ ಡಿಸೈರ್ ಸೆಡಾನ್ ಕಾರು ಆಲ್ಟೋಗೆ ಭಾರೀ ಪೈಪೋಟಿ ನೀಡುತ್ತಿದೆ.

ನೂತನ ಡಿಸೈರ್ ಕಾರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ತನ್ನ ಆವೃತ್ತಿಯಲ್ಲಿ ಉತ್ತಮ ಇಂಧನ ಕ್ಷಮತೆ ನೀಡುವ ಕಾರು ಎಂದು ಹೆಸರು ಪಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *