ಹುತಾತ್ಮ ಯೋಧ ದಿವಿನ್‌ ಮದುವೆಗೆ ಇನ್ನೆರಡು ತಿಂಗಳು ಬಾಕಿಯಿತ್ತು, ಲಗ್ನಪತ್ರಿಕೆಯೂ ಪ್ರಿಂಟ್‌ ಆಗಿತ್ತು!

Public TV
1 Min Read

– ದಿವಿನ್‌ ಪಾರ್ಥಿವ ಶರೀರ ಮಂಗಳವಾರ ರಾತ್ರಿ ಹುಟ್ಟೂರಿಗೆ ಬರುವ ನಿರೀಕ್ಷೆ

ಮಡಿಕೇರಿ: ಒಂದು ದಿನದ ಹಿಂದೆಯಷ್ಟೇ ಹುತಾತ್ಮರಾದ ಕೊಡಗಿನ ವೀರಯೋಧ ದಿವಿನ್ ಅವರು 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ದಿವಿನ್ ಅವರಿಗೆ ನಿಶ್ಚಿತಾರ್ಥ ಕೂಡ ನೆರವೇರಿತ್ತು. 2025ರ ಫೆಬ್ರವರಿಯಲ್ಲಿ ದಿವಿನ್ ವಿವಾಹ ನಿಶ್ಚಯವಾಗಿತ್ತು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಕುಟುಂಬಸ್ಥರು ಲಗ್ನ ಪತ್ರಿಕೆಯನ್ನೂ ಪ್ರಿಂಟ್​ ಮಾಡಿಸಿದ್ದರಂತೆ. ಆದ್ರೆ ಸೇನಾ ವಾಹನ ಪ್ರಪಾತಕ್ಕೆ ಉರುಳಿ ದುರಂತ ಸಂಭವಿಸಿದೆ. ಕೂಡಲೇ ದಿವಿನ್‌ರನ್ನ ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗ್ತಿತ್ತು. ಎರಡು ದಿನದ ಹಿಂದೆಯಷ್ಟೇ ದಿವಿನ್ ತಾಯಿ ಜಯಾ ಅವರು ಶ್ರೀನಗರದ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅಮ್ಮನ ಕರೆಗೆ ದಿವಿನ್ ಕಣ್ಣು ಬಿಡುವ ಪ್ರಯತ್ನ ಮಾಡಿದ್ದರಂತೆ. ಆದರೆ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿದ್ದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ. ಹೀಗಾಗಿ ಮದುವೆ ಆಸೆ, ಜೀವನದ ನೂರಾರು ಕನಸು ನುಚ್ಚುನೂರಾಗಿದೆ. ಇದನ್ನೂ ಓದಿ: ಸಿಂಗ್ ಶೋಕಾಚರಣೆ ವೇಳೆ ರಾಹುಲ್ ವಿಯೆಟ್ನಾಂ ಪ್ರವಾಸ – ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ಗರಂ

ಗ್ರಾಮದಲ್ಲಿ ಒಳ್ಳೆಯ ಹುಡುಗನಾಗಿದ್ದ ದಿವಿನ್‌ ಇತ್ತಿಚೆಗೆ ತಂದೆಯನ್ನ ಕಳೆದುಕೊಂಡಿದ್ದರು. ತಾಯಿ ಮಗ ಮಾತ್ರ ನೂತನವಾಗಿ ನಿರ್ಮಾಣಗೊಂಡ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಯೇಸುವಿನ ಕುರಿತು ಅವಹೇಳನ – ಕೊಡಗಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲು

ಇನ್ನೂ ಯೋಧ ದಿವಿನ್ ಪಾರ್ಥಿವ ಶರೀರ ಜಮ್ಮುವಿನಿಂದ ಫ್ಲೈಟ್‌ನಲ್ಲಿ ನೇರವಾಗಿ ಬೆಂಗಳೂರಿಗೆ ಬಂದು ನಂತರ ಹುಟ್ಟೂರು ಆಲೂರು ಸಿದ್ದಾಪುರಕ್ಕೆ ರವಾನಿಸಲಾಗುತ್ತದೆ. ಮಂಗಳವಾರ ರಾತ್ರಿ ಅಥವಾ ಬುಧವಾರ ಬೆಳಗ್ಗೆ ಪಾರ್ಥೀವ ಶರೀರವನ್ನು ಹುಟ್ಟೂರಿಗೆ ತರುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಶಾಸಕ ಮಂಥರ್ ಗೌಡ ಹುಟ್ಟೂರಿನ ಶಾಲಾ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅಂತ್ಯಕ್ರಿಯೆ ನೆರವೇರಿಸಲು ಅಗತ್ಯ ಸಿದ್ಧತೆ ಮತ್ತು ಸ್ಥಳ ಪರಿಶೀಲನೆ ನಡೆಸಲಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ರೈತರಿಂದ ಬಂದ್ – 221 ರೈಲುಗಳ ಸಂಚಾರ ವ್ಯತ್ಯಯ – 163 ರೈಲುಗಳು ಕ್ಯಾನ್ಸಲ್

Share This Article