ವಿಮಾನ ದುರಂತದ ಕಹಿ ಅನುಭವ ಬಿಚ್ಚಿಟ್ಟ ‘ಮಾರ್ಟಿನ್’ ನಿರ್ದೇಶಕ

Public TV
1 Min Read

ತ್ತೀಚೆಗೆ ನಟ ಧ್ರುವ ಸರ್ಜಾ (Dhruva Sarja) ಸೇರಿದಂತೆ ‘ಮಾರ್ಟಿನ್’ (Martin) ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಚಿತ್ರತಂಡದವರಿಗೆ ಆ ಘಟನೆ ಯಾವ ರೀತಿ ಕಹಿ ಅನುಭವ ಕೊಟ್ಟಿತ್ತು ಎಂದು ನಿರ್ದೇಶಕ ಎ.ಪಿ ಅರ್ಜುನ್ (A.p Arjun) ಇದೀಗ ಚಿತ್ರದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ:ರಾಜಮೌಳಿ ಚಿತ್ರದಲ್ಲಿ 8 ಗೆಟಪ್‌ನಲ್ಲಿ ಕಾಣಿಸಿಕೊಳ್ತಾರೆ ಪ್ರಿನ್ಸ್

ಕಳೆದ ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಸಿಕೊಂಡು ವಿಮಾನದಲ್ಲಿ ಬರುತ್ತಿದ್ದ ‘ಮಾರ್ಟಿನ್’ ಸಿನಿಮಾ ತಂಡದವರಿಗೆ ಶಾಕ್ ಆಗಿತ್ತು. ಕಾರಣಾಂತರಗಳಿಂದ ವಿಮಾನದ ಹಾರಾಟದಲ್ಲಿ ತೊಂದರೆ ಉಂಟಾಗಿತ್ತು. ಇನ್ನೇನು ಆ ವಿಮಾನ ಅಪಘಾತ ಆಗುತ್ತದೆ ಎಂದು ಇಡೀ ಚಿತ್ರತಂಡದವರು ಭಯಗೊಂಡಿದ್ದರು. ಆ ಕ್ಷಣ ಹೇಗಿತ್ತು ಎಂಬುದನ್ನು ಎ.ಪಿ. ಅರ್ಜುನ್ ಬಿಚ್ಚಿಟ್ಟಿದ್ದಾರೆ.

ಅಂದು ನಮ್ಮೆಲ್ಲರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಪಕ್ಕದಲ್ಲಿ ಸ್ವಾಮಿ ಕುಳಿತಿದ್ದರು. ಅವರ ಪಕ್ಕದಲ್ಲಿ ನಾಯಕಿ ವೈಭವಿ ಇದ್ದರು. ಅಂದು ಯಾರೂ ಧೈರ್ಯವಾಗಿ ಇರಲಿಲ್ಲ. ಅಷ್ಟು ಹೊತ್ತಿಗಾಗಲೇ ನಟಿ ವೈಭವಿ ಅವರು ತಂದೆ-ತಾಯಿಗೆ ಮೆಸೇಜ್ ಮಾಡಿದ್ದರು. ನಾವೆಲ್ಲ ಸತ್ತು ಹೋಗುತ್ತಿದ್ದೇವೆ. ನಾವೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಅಂತ ಮೆಸೇಜ್ ಮಾಡಿ ಜೋರಾಗಿ ಅಳುತ್ತಿದ್ದರು. ಅಂದು ಏನು ಅವಘಡ ನಡೆಯದೇ ಸೇಫ್ ಆದೆವು. ಆ ದೇವರೇ ನಮ್ಮನ್ನು ಕಾಪಾಡಿದ್ದು. ಇದು ಎಲ್ಲರಿಗೂ ಪುನರ್ ಜನ್ಮ ಎಂದು ಎ.ಪಿ. ಅರ್ಜುನ್ ಸ್ಮರಿಸಿದ್ದರು.

ಮಾರ್ಟಿನ್ ಸಿನಿಮಾ ಶೂಟಿಂಗ್ ಕಂಪ್ಲಿಟ್ ಆಗಿದೆ. ಧ್ರುವ ಸರ್ಜಾಗೆ ವೈಭವಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ಬಗ್ಗೆ ತಿಳಿಸೋದಾಗಿ ಚಿತ್ರತಂಡ ಅಪ್‌ಡೇಟ್ ನೀಡಿದೆ.

Share This Article