ನಾಗಚೈತನ್ಯನ ಮದುವೆ ಆಗೋದೇ ಜೀವನದ ಟಾರ್ಗೆಟ್- ನಟಿ ರೀತು ಚೌಧರಿ

Public TV
1 Min Read

ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಸಮಂತಾ (Samantha) ಜೊತೆಗಿನ ಡಿವೋರ್ಸ್ ಬಳಿಕ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. ನಾಗಚೈತನ್ಯ ರಿಲೇಶನ್‌ಶಿಪ್ ಸ್ಟೇಟಸ್, 2ನೇ ಮದುವೆ ಬಗ್ಗೆ ಆಗಾಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ನಾಗ ಚೈತನ್ಯ ಅವರನ್ನು ಮದುವೆ ಆಗೋದೇ ನನ್ನ ಟಾರ್ಗೆಟ್ ಎಂದು ಹೇಳಿಕೆ ನೀಡುವ ಮೂಲಕ ನಟಿ ರೀತು ಚೌಧರಿ (Rithu Chowdary) ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ನನಗೆ ನಾಗಚೈತನ್ಯ ಎಂದರೆ ತುಂಬಾ ಇಷ್ಟ. ಅವರನ್ನು ಮದುವೆಯಾಗೋದೇ ನನ್ನ ಜೀವನದ ಟಾರ್ಗೆಟ್ ಆಗಿದೆ. ಡಿವೋರ್ಸ್ ಆಗಿರುವ ವ್ಯಕ್ತಿಯನ್ನು ಮತ್ತೆ ಮದುವೆ ಆಗೋದಕ್ಕೆ ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಸದ್ಯ ರೀತು ಚೌಧರಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ. ನಟಿಯ ಮಾತಿಗೆ ನಾಗಚೈತನ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ, ರೀತು ಚೌಧರಿ ‘ಗೋರಿಂಟಕು’ ಸೀರಿಯಲ್‌ನಲ್ಲಿ ಗಾಯತ್ರಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

2021ರಲ್ಲಿ ಸಮಂತಾಗೆ ನಾಗಚೈತನ್ಯ ಡಿವೋರ್ಸ್ ಕೊಟ್ಟ ಮೇಲೆ ಶೋಭಿತಾ (Shobita) ಜೊತೆ ನಟನ ಹೆಸರು ಸದ್ದು ಮಾಡಿತ್ತು. ಇದಾದ ಬಳಿಕ ಇತ್ತೀಚೆಗೆ ಖ್ಯಾತ ಉದ್ಯಮಿ ಪುತ್ರಿ ಜೊತೆ ಸಮಂತಾ ಮಾಜಿ ಪತಿಯ ಮದುವೆ ಎಂದು ಹೇಳಲಾಗಿತ್ತು. ಈ ಬಗ್ಗೆ ನಾಗಾರ್ಜುನ ಅಕ್ಕಿನೇನಿ ಕುಟುಂಬ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಶಾರುಖ್ ನಟನೆಯ ‘ಜವಾನ್’ ಸಿನಿಮಾ

ಸಿನಿಮಾ ಕೆರಿಯರ್‌ಗೆ ಬಿಗ್ ಬ್ರೇಕ್‌ಗಾಗಿ ನಾಗಚೈತನ್ಯ ಕಾಯ್ತಿದ್ದಾರೆ. ಈಗ ಸಾಯಿ ಪಲ್ಲವಿ (Sai Pallavi) ಜೊತೆ ಮತ್ತೆ ರೊಮ್ಯಾನ್ಸ್ ಮಾಡಲು ನಟ ಸಜ್ಜಾಗಿದ್ದಾರೆ. ಅಲ್ಲು ಅರವಿಂದ್ ನಿರ್ಮಾಣದಲ್ಲಿ ಸಾಯಿಪಲ್ಲವಿ- ನಾಗಚೈತನ್ಯ ಹೊಸ ಸಿನಿಮಾ ಮೂಡಿ ಬರಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್