ಇನ್‌ಸ್ಟಾಗ್ರಾಂ ಪ್ರೇಯಸಿ ಆತ್ಮಹತ್ಯೆ ಕೇಸ್ – ಪ್ರಿಯಕರ ಅರೆಸ್ಟ್

Public TV
1 Min Read

ದಾರವಾಡ: ಇನ್‌ಸ್ಟಾಗ್ರಾಂ (Instagram) ಲವ್‍ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಪ್ರಿಯಕರನನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಧಾರವಾಡದ (Dharwad) ಶಿವಳ್ಳಿ ಗ್ರಾಮದ ವಿಜಯ್ ನಾಯ್ಕರ್ ಎಂದು ಗುರುತಿಸಲಾಗಿದೆ. ಈತ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಶ್ವೇತಾ (23) ವಿಚ್ಛೇದನಕ್ಕೆ (Divorce) ಕಾರಣನಾಗಿದ್ದ. ಮಹಿಳೆ ಪತಿಯನ್ನು ಬಿಟ್ಟು ಬಂದು ಧಾರವಾಡದ ಶ್ರೀನಗರದಲ್ಲಿ ರೂಮ್ ಮಾಡಿಕೊಂಡಿದ್ದಳು. ಆಕೆ ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದನ್ನೂ ಓದಿ: ಇನ್‌ಸ್ಟಾಗ್ರಾಂ ಪ್ರೀತಿ ತಂದ ಫಜೀತಿ – ಪತಿ ಬಿಟ್ಟು ಬಂದಿದ್ದ ಗೃಹಿಣಿ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ

ಶ್ವೇತಾ ನೇಣಿಗೆ ಶರಣಾಗುವ ಮುನ್ನ, ನನ್ನ ಸಾವಿಗೆ ನಾನೇ ಕಾರಣ ಎಂದು ಕೈಯಲ್ಲಿ ಬರೆದುಕೊಂಡಿದ್ದಳು. ಆಕೆಯನ್ನು ಆರೋಪಿ ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ವಿಜಯ್ ಕುಟುಂಬ ಒಪ್ಪದ ಕಾರಣ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಶ್ವೇತಾ ಕುಟುಂಬದವರು ಧಾರವಾಡ ಉಪನಗರ ಠಾಣೆಯಲ್ಲಿ ವಿಜಯ್ ನಾಯ್ಕರ್ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಹುಬ್ಬಳ್ಳಿ | ಬೀಗ ಮುರಿದು ರಾಷ್ಟ್ರೀಕೃತ ಬ್ಯಾಂಕ್ ದರೋಡೆಗೆ ಯತ್ನ

Share This Article