ಡೋಂಗಿ ಬಾಬಾನ ಮೋಹದ ಬಲೆಗೆ ಬಿದ್ದ ವಿವಾಹಿತೆ – ಯಜಮಾನ ಬಲಿ

Public TV
1 Min Read

ಚಾಮರಾಜನಗರ: ಆ ದಂಪತಿ ಚಿಕಿತ್ಸೆಗೆಂದು ಒಬ್ಬ ಬಾಬಾನ ಬಳಿಗೆ ತೆರಳಿದ್ದರು. ಚಿಕಿತ್ಸೆ ನೀಡಿ ಗುಣಪಡಿಸಿದ ಬಾಬಾನ ವಕ್ರದೃಷ್ಟಿ ಸುಂದರ ಸಂಸಾರದ ಮೇಲೆ ಬಿದ್ದಿತ್ತು. ಇದರಿಂದ ಸುಂದರವಾಗಿದ್ದ ಆ ಸಂಸಾರದಲ್ಲಿ ಬಿರುಗಾಳಿ ಬೀಸಿ ಮನೆಯ ಯಜಮಾನನೇ ಬಲಿಯಾಗಿದ್ದಾನೆ.

ಮಹಮ್ಮದ್ ಅಫ್ಘನ್ ಮತ್ತು ತನ್ಜೀಯಾ ಕೌಸರ್ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಅಮೀರ್‌ಜಾನ್ ರೋಡ್‌ನ ನಿವಾಸಿಗಳು. ತನ್ಜೀಯಾ ಕೌಸರ್‌ಗೆ ಕಳೆದ ಕೆಲವು ತಿಂಗಳ ಹಿಂದೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೈಸೂರಿನ ರಾಜೀವನಗರದ ಬಾಬಾ ಖುರ್ರಂ ಪಾಷಾನ ಬಳಿಗೆ ತೆರಳಿದ್ದರು. ಇದನ್ನೂ ಓದಿ: 6 ವರ್ಷದ ಮಗುವಿನೊಂದಿಗೆ ವೇಳಾಪಟ್ಟಿ ಒಪ್ಪಂದ ಮಾಡಿಕೊಂಡ ಅಪ್ಪ

ನಾನು ದೇವರ ಪ್ರತಿರೂಪ ಎಂದು ಹೇಳಿಕೊಂಡ ಬಾಬಾ ಥೈರಾಯ್ಡ್ ಸಮಸ್ಯೆ ಬಗೆಹರಿಸಿದ್ದ. ಬಳಿಕ ತನ್ಜೀಯಾ ಜೊತೆ ಆತನ ಒಡನಾಟ ಜಾಸ್ತಿಯಾಗಿತ್ತು. ಇದರಿಂದ ದಂಪತಿಯ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು. ಸಾಕಷ್ಟು ಬಾರಿ ಜಗಳವೂ ನಡೆದಿತ್ತು. ಇದೆಲ್ಲದರಿಂದ ಮನನೊಂದಿದ್ದ ಅಫ್ಘನ್ ಗುರುವಾರ ರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ ಬಾಬಾನಲ್ಲ. ಡೋಂಗಿ ಬಾಬಾನಿಂದ ಸಂಸಾರ ಹಾಳಾಗಿದೆ. ಬಾಬಾ ಖುರ್ರಂ ಪಾಷಾ ತನ್ಜೀಯಾಗೆ ಸಂಪೂರ್ಣ ಮೈಂಡ್ ವಾಷ್ ಮಾಡಿದ್ದ ಎಂಬುದು ಅಫ್ಗನ್ ಸಂಬಂಧಿಕರ ಆರೋಪ. ಬಾಬಾನ ಮಾತು ಕೇಳಿಕೊಂಡು ತನ್ಜೀಯಾ ತನ್ನ ತವರು ಮನೆ ಮೈಸೂರಿಗೆ ಹೋಗಿ ಸೇರಿಕೊಂಡಿದ್ದಳು. ಅಫ್ಘನ್ ಕರೆದರೂ ಆಕೆ ಗಂಡನ ಮನೆಗೆ ಬಂದಿರಲಿಲ್ಲ. ಇದನ್ನೂ ಓದಿ: ಮದುವೆ ಗಂಡು ಬರೋದು ತಡವಾಗಿದ್ದಕ್ಕೆ ಅದೇ ಮಂಟಪದಲ್ಲಿ ಇನ್ನೊಬ್ಬನನ್ನು ವರಿಸಿದ ವಧು

ಇದೆಲ್ಲದರಿಂದ ಸಾಕಷ್ಟು ಮನನೊಂದಿದ್ದ ಅಫ್ಘನ್ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಖುರ್ರಂ ಪಾಷಾ, ಅಬ್ದುಲ್ ರೆಹಮಾನ್, ಮಹಮದ್ ಅಜೀಂ, ಆಯೂಬ್ ಷರೀಪ್ ಕಾರಣ ಎಂದು ಬರೆದಿದ್ದಾರೆ. ಪ್ರಕರಣ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *