ಕಾರಿನಲ್ಲೇ ವಿದ್ಯಾರ್ಥಿ ಜೊತೆ ರಾಸಲೀಲೆ – ಬೆತ್ತಲೆಯಾಗಿ ಸಿಕ್ಕಿಬಿದ್ದ ಇಂಗ್ಲಿಷ್ ಶಿಕ್ಷಕಿ ಅರೆಸ್ಟ್

Public TV
1 Min Read

ನ್ಯೂಯಾರ್ಕ್: ಅಮೆರಿಕದ (America) ನ್ಯೂಜೆರ್ಸಿಯ (New Jersey) ವಿವಾಹಿತ ಶಿಕ್ಷಕಿಯೊಬ್ಬಳು (School Teacher) ಅಸ್ಸನ್‍ಪಿಂಕ್ ವನ್ಯಜೀವಿ ನಿರ್ವಹಣಾ ಪ್ರದೇಶದ ವಿದ್ಯಾರ್ಥಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ (Sexually Assaulting) ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಶಿಕ್ಷಕಿ ಜೆಸ್ಸಿಕಾ ಸಾವಿಕಿ (37) ಟ್ರೆಂಟನ್‍ನ ಹ್ಯಾಮಿಲ್ಟನ್ ಹೈಸ್ಕೂಲ್‌ನ ಇಂಗ್ಲಿಷ್ ಶಿಕ್ಷಕಿ ಎಂದು ಗುರುತಿಸಲಾಗಿದೆ. ಸಾವಿಕಿ ಮತ್ತು ಶಾಲಾ ವಿದ್ಯಾರ್ಥಿಯನ್ನು ನ್ಯೂಜೆರ್ಸಿಯ ವನ್ಯಜೀವಿ ಪರಿವೀಕ್ಷಕರು ನಗ್ನ ಸ್ಥಿತಿಯಲ್ಲಿ ಪತ್ತೆ ಹಚ್ಚಿದ್ದಾರೆ. ವನ್ಯಜೀವಿ ನಿರ್ವಹಣಾ ಪ್ರದೇಶದಲ್ಲಿ ಕಾರಿನ ಹಿಂಬದಿ ಸೀಟ್‍ನಲ್ಲಿ 16 ವರ್ಷದ ವಿದ್ಯಾರ್ಥಿಯೊಂದಿಗೆ ಶಾಲಾ ಶಿಕ್ಷಕಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದು ಸಾಕ್ಷಿಗಳು ಸಿಕ್ಕಿವೆ. ಅಲ್ಲದೇ ಆಕೆ ವಿಚಾರಣೆ ವೇಳೆ ವಿದ್ಯಾರ್ಥಿಯೊಂದಿಗೆ ಐದು ಬಾರಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ – ಪತ್ನಿಯ ಉಸಿರುಗಟ್ಟಿಸಿ ಹತ್ಯೆಗೈದ ಪತಿ

ಆರೋಪಿ ಶಿಕ್ಷಕಿಯನ್ನು ಸೋಮವಾರ ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮುಂದಿನ ವಿಚಾರಣೆಯವರೆಗೂ ಮಾನ್‍ಮೌತ್ ಕೌಂಟಿ ಸಂಸ್ಥೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ, ಆರೋಪಿಯ ನಡವಳಿಕೆ ಶಾಲಾ ವೃತ್ತಿಪರ ಮಾನದಂಡಗಳಿಗೆ ವಿರುದ್ಧವಾಗಿದೆ. ಉದ್ಯೋಗಿಯ ವೈಯಕ್ತಿಕ ನಡವಳಿಕೆಯಿಂದ ಶಾಲೆ ದೂರ ಉಳಿಯಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಹಾನಿಯುಂಟು ಮಾಡುವ ಯಾವುದೇ ಅಪರಾಧಗಳನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದೆ.

ಆಕೆಯ ಬಂಧನದ ನಂತರ ಶಿಕ್ಷಕಿಯ ಪ್ರೊಫೈಲ್‌ನ್ನು  ಶಾಲೆಯ ವೆಬ್‍ಸೈಟ್‌ನ ಶಿಕ್ಷಕರ ಡೈರೆಕ್ಟರಿಯಿಂದ ತೆಗೆದುಹಾಕಲಾಗಿದೆ. ಆಕೆ ಏಳು ವರ್ಷಗಳಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲೇ ನೇಣಿಗೆ ಶರಣು

Share This Article