ಮಾತುಕತೆಗೆಂದು ಕರೆಸಿ ಗರ್ಭಿಣಿ ಮಗಳನ್ನೇ ಎಳೆದೊಯ್ದ ಪೋಷಕರು- ಪತ್ನಿಗಾಗಿ ಪತಿ ಕಣ್ಣೀರು

Public TV
1 Min Read

ಹುಬ್ಬಳ್ಳಿ: ಮನೆಯವರ ವಿರೋಧದ ನಡುವೆಯೂ ತನಗಿಂತ ಚಿಕ್ಕ ವಯಸ್ಸಿನವನನ್ನು ಪ್ರೀತಿ ಮಾಡಿ ಮದುವೆಯಾಗಿ (Marriage) ಸಹ ಜೀವನ ನಡೆಸುತ್ತಿದ್ದರು. ಈ ವೇಳೆ ಯುವತಿಯನ್ನು ಆಕೆಯ ಪೋಷಕರು ಬಲವಂತವಾಗಿ ಕರೆದುಕೊಂಡು ಹೋದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಇದೀಗ ಪತ್ನಿಗಾಗಿ ಪೊಲೀಸ್ ಠಾಣೆ ಮುಂದೆ ಪ್ರಿಯಕರ ಕಣ್ಣೀರು ಹಾಕುತ್ತಿದ್ದಾನೆ.

ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಮೂಲದ ಯುವತಿ ತನಗಿಂತ ಚಿಕ್ಕ ವಯಸ್ಸಿನ ಹುಬ್ಬಳ್ಳಿ ಮೂಲದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದಳು. ಮದುವೆ ಮುನ್ನವೇ ದೈಹಿಕ ಸಂಪರ್ಕ ಬೆಳೆಸಿ ಯುವತಿ ಗರ್ಭಿಣಿಯಾಗಿದ್ದಾಳೆ. ಇದು ಆಕೆಯ ಮನೆಯವರಿಗೆ ಗೊತ್ತಾದ ಹಿನ್ನೆಲೆ ಇದೇ ಫೆಬ್ರವರಿ 14ರಂದು ಶಿವಮೊಗ್ಗದಲ್ಲಿ (Shivamogga) ಮದುವೆಯಾಗಿದ್ದರು. ಬಳಿಕ ಅಲ್ಲಿಂದ ಗೋವಾಗೆ ತೆರಳಿ ವಾಸವಾಗಿದ್ದರು. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್‌ ಖರ್ಗೆ

ಈ ಬಗ್ಗೆ ಯುವತಿಯ ಮನೆಯವರು ಹರಿಹರದಲ್ಲಿ ಪ್ರಕರಣ ದಾಖಲಿಸಿದ ಹಿನ್ನೆಲೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು (Police) ಮಾತುಕತೆಗೆಂದು ಹುಡುಗನ ಮನೆಯವರನ್ನು ಮತ್ತು ಹುಡುಗಿ ಮನೆಯವರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಯುವತಿಯ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಈಗ ಯುವಕ, ನಾವಿಬ್ಬರೂ ಒಪ್ಪಿ ಮದುವೆ ಆಗಿದ್ದೇವೆ. ವಾಪಸ್ ಕರೆಸುವಂತೆ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಿದ್ದಾನೆ. ಇದನ್ನೂ ಓದಿ: ಕೈ ನಾಯಕರ ಜೊತೆ ಕಾಣಿಸಿಕೊಂಡ ಸಿ.ಪಿ ಯೋಗೇಶ್ವರ್ ಪುತ್ರಿ!

Share This Article