ಅಣ್ಣ ಅಣ್ಣ ಅಂತ ಮನೆಯಲ್ಲೇ ಲವರ್ ಜೊತೆ ಚಕ್ಕಂದ – ಹಳೆ ಪ್ರೇಮಿ ಜೊತೆ ಸೇರಿ ಪತಿಯ ಹತ್ಯೆ

Public TV
1 Min Read

ಮೈಸೂರು: ಪತ್ನಿಯೊಬ್ಬಳು ಹಳೆಯ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಶಿವಕುಮಾರ್ ಮೃತ ಪತಿ. ಪ್ರಿಯಕರನ ಜೊತೆ ಸೇರಿ ಪತ್ನಿ ದಿವ್ಯಾ(22) ಈ ಕೃತ್ಯ ಎಸಗಿದ್ದಾಳೆ. ಮೂರು ವರ್ಷಗಳ ಹಿಂದೆ ಮೈಸೂರಿನ ಗುಂಗ್ರಾಲ್ ಛತ್ರದ ದಿವ್ಯಾ ಮಂಡ್ಯ ಹುಲಿಕೆರೆ ಶಿವಕುಮಾರ್ ಅವರನ್ನು ವಿವಾಹವಾಗಿದ್ದಳು. ಇದನ್ನೂ ಓದಿ: ಪತ್ನಿಯ ಜೊತೆ ಸೆಕ್ಸ್ ಮಾಡೋದನ್ನ ನೋಡೋ ಆಸೆ – ಅದಕ್ಕಾಗಿ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟ ಪತಿ

ಮದುವೆ ನಂತರ ಮೃತ ಶಿವಕುಮಾರ್ ಪತ್ನಿಗೆ ದಿವ್ಯಾಗೆ ಸ್ಮಾರ್ಟ್ ಫೋನ್ ಕೊಡಿಸಿದ್ದನು. ನಂತರ ಫೇಸ್‍ಬುಕ್ ಮೂಲಕ ಹಳೆ ಪ್ರಿಯಕರ ಶ್ರೀರಂಗಪಟ್ಟಣ ಬನ್ನಂಗಾಡಿ ನಿವಾಸಿ ಚೇತನ್ ಜೊತೆ ದಿವ್ಯಾ ಸಂಪರ್ಕ ಹೊಂದಿದ್ದಳು. ದಿನ ಕಳೆದಂತೆ ಹಳೆಯ ಲವ್ವರ್ ಚೇತನ್‍ನನ್ನು ಪತಿಗೆ ಸಹೋದರ ಎಂದು ಪರಿಚಯಿಸಿದ್ದಳು. ಆದರೆ ಪ್ರಿಯಕರನಿಗೆ ಅಣ್ಣನ ಪಟ್ಟ ಕಟ್ಟಿ, ಅಣ್ಣ ಅಣ್ಣ ಅಂತ ಮನೆಯಲ್ಲೇ ಚಕ್ಕಂದ ಆಡುತ್ತಿದ್ದಳು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಶಿವಕುಮಾರ್ ತಮ್ಮಿಬ್ಬರಿಗೆ ಅಡ್ಡ ಬರುತ್ತಾನೆಂದು ದಿವ್ಯಾ ಮತ್ತು ಚೇತನ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಆದರೆ ಪತಿ ಶಿವಕುಮಾರ್ ಗೆ ಇವರಿಬ್ಬರ ಮೇಲೆ ಯಾವುದೇ ಅನುಮಾನ ಬಂದಿರಲಿಲ್ಲ. ಆದರೂ ಮೂರು ದಿನಗಳ ಹಿಂದೆ ಮೈಸೂರು ಹುಣಸೂರು ರಸ್ತೆಯ ಚಿಕ್ಕಾಡನಹಳ್ಳಿ ಬಳಿ ಕುತ್ತಿಗೆಯನ್ನು ಊಟದ ಬ್ಯಾಗ್‍ನಿಂದ ಬಿಗಿದು ಶಿವಕುಮಾರ್ ಹತ್ಯೆ ಮಾಡಲಾಗಿತ್ತು.

ಹತ್ಯೆ ಮಾಡಿ ನಂತರ ಅಪಘಾತ ಎಂದು ಚೇತನ್ ಬಿಂಬಿಸಿದ್ದನು. ಅದೇ ರೀತಿ ಅಪಘಾತದ ಸ್ಥಿತಿಯಲ್ಲಿ ಶಿವಕುಮಾರ್ ಮೃತದೇಹ ಪತ್ತೆಯಾಗಿತ್ತು. ಆದರೆ ಕುತ್ತಿಗೆ ಬಳಿ ಊಟದ ಬ್ಯಾಗ್ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇರೆಗೆ ಪತ್ನಿ ದಿವ್ಯಾಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ.

ರೌಡಿ ಶೀಟರ್ ಭರತ್, ಕೃಷ್ಣ ಜೊತೆ ಸೇರಿ ಚೇತನ್ ಹತ್ಯೆ ಮಾಡಿದ್ದನು. ಸದ್ಯಕ್ಕೆ ಬಿಳಿಕೆರೆ ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *