ಮದುವೆ ಆಗಬೇಕಿದ್ದ ಹುಡುಗಿ ಕೈಕೊಟ್ಟು ಮತ್ತೊಬ್ಬನೊಂದಿಗೆ ಎಸ್ಕೇಪ್ – ಯುವಕ ಕಂಗಾಲು

Public TV
2 Min Read

– 5 ಲಕ್ಷ ಪಡೆದು ಪಂಗನಾಮ ಹಾಕಿದ ಖತರ್ನಾಕ್ ಅತ್ತೆ ವಿರುದ್ಧ ದೂರು

ಬೆಂಗಳೂರು: ಅವರಿಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು (Love). ಇಬ್ಬರ ಪ್ರೀತಿ ವಿಚಾರ ಗೊತ್ತಾಗಿ ಮನೆಯಲ್ಲಿ ಎಂಗೇಜ್ಮೆಂಟ್ ಕೂಡ ಮಾಡಿದ್ರು. ಮದುವೆ (Marriage) ಕೆಲ ದಿನಗಳಷ್ಟೇ ಬಾಕಿಯಿತ್ತು ಅನ್ನುವಷ್ಟರಲ್ಲಿ ಯುವತಿ ಮತ್ತೊಬ್ಬನ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಈ ಮಧ್ಯೆ ಮದುವೆ ಆಸೆಯಲ್ಲಿದ್ದ ಯುವಕ ಭಾವಿ ಅತ್ತೆಗೆ 5 ಲಕ್ಷ ಹಣ ಕೂಡ ಕೊಟ್ಟಿದ್ನಂತೆ. ಈಗ ಹುಡುಗಿನೂ ಇಲ್ಲ, ಹಣ ಇಲ್ಲದಂತಾಗಿ ಯುವಕ ಪೊಲೀಸ್ (Police) ಠಾಣೆ ಮೆಟ್ಟಿಲೇರಿದ್ದಾನೆ.

ಹೌದು. ಬೆಂಗಳೂರು (Bengaluru) ಹೊರವಲಯದ ಅವಲಹಳ್ಳಿಯಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ವರದಿಯಾಗಿದೆ. ಇಲ್ಲಿನ ವಾಸಿಯಾದ ಜೋಸೆಫ್ ಅನ್ನೋ ಯುವಕ ಕಳೆದ 2 ವರ್ಷಗಳಿಂದ ಕ್ಯಾತ್ರಿನ್ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದ. ಆಕೆ ಕೂಡ ಜೋಸೆಫ್‌ನನ್ನ ಇಷ್ಟಪಟ್ಟಿದ್ದಳು. ಇಬ್ಬರ ವಿಚಾರ ಮನೆಯಲ್ಲಿ ಗೊತ್ತಾಗಿ, ಎಂಗೇಜ್ಮೆಂಟ್ ಕೂಡ ಮಾಡಿದ್ರು. ಮದುವೆಗೆ ಇನ್ನು ಎರಡು ತಿಂಗಳಷ್ಟೇ ಬಾಕಿಯಿತ್ತು. ಅಷ್ಟರಲ್ಲಿ ಮದುವೆಯಾಗಬೇಕಿದ್ದ ಹುಡುಗಿ ಮತ್ತೊಬ್ಬ ಹುಡುಗನ ಜೊತೆಗೆ ಎಸ್ಕೇಪ್ ಆಗಿ ಬೇರೊಂದು ಮದುವೆ ಆಗಿದ್ದಾಳೆ ಎಂದು ಹೇಳಲಾಗಿದೆ.

ಬರೀ ಇಷ್ಟೇ ಆಗಿದ್ರೆ ಹೋಗಲಿ ಬಿಡಿ ಅನ್ನಬಹುದಿತ್ತು. ಆದ್ರೆ ಈ ಯುವಕ ಮದುವೆ ಆಗೋ ಖುಷಿಯಲ್ಲಿ ಭಾವಿ ಅತ್ತೆ ಸಲೇನಾ ಮೆರಿ ಅನ್ನೋರಿಗೆ 5 ಲಕ್ಷ ಹಣ ಕೊಟ್ಟಿದ್ದನಂತೆ. ಮದುವೆ ಖರ್ಚಿಗೆ ಬೇಕಾಗಬಹುದು ಆಮೇಲೆ ಕೊಡ್ತೀನಿ ಅಂದಿದ್ದರಂತೆ. ಹೇಗಿದ್ರೂ ಮದುವೆ ಮಾಡ್ತಿದ್ದಾರೆ ಅನ್ನೋ ಧೈರ್ಯದಲ್ಲಿ ಯುವಕ ಕೂಡ ಕಷ್ಟಪಟ್ಟು ಕೂಡಿಟ್ಟ ಹಣ ಕೊಟ್ಟಿದ್ದಾನೆ. ಆದ್ರೆ ಯಾವಾಗ ಯುವತಿ ಕೈ ಕೊಟ್ಟು ಬೇರೊಬ್ಬನ ಜೊತೆಗೆ ಎಸ್ಕೇಪ್ ಆದ್ಲೋ, ಭಾವಿ ಅತ್ತೆಯ ಬಳಿ ಹೋಗಿ ನನ್ನ ಹಣ ವಾಪಸು ಕೊಡಿ ಅಂತಾ ಕೇಳಿದ್ದಾನೆ.. ಅದಕ್ಕೆ ಆಯಮ್ಮ ನೀನ್ಯಾರೋ ನಂಗೆ ಗೊತ್ತೇ ಇಲ್ಲ. ಅದೇನ್ ಮಾಡ್ಕೋತಿಯೋ ಮಾಡ್ಕೋ ಅಂತಾ ಹೇಳಿದ್ದಾರೆ.

ಅತ್ತ ಹುಡುಗಿನೂ ಇಲ್ಲ, ಕೊಟ್ಟ ಹಣವೂ ಇಲ್ಲದೇ ಕಂಗಾಲಾದ ಯುವಕ ಜೋಸೆಫ್ ಅವಲಹಳ್ಳಿ ಪೊಲೀಸ್ ಠಾಣೆಗೆ (Avalahalli Police Station) ದೂರು ನೀಡಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್