ಸಾಂದರ್ಭಿಕ ಚಿತ್ರ
ತುಮಕೂರು: ಯುವಕನೊಬ್ಬ ದುಬಾರಿ ಮೌಲ್ಯದ ಸೀರೆ ಬೇಡಿಕೆ ಇಟ್ಟಿದ್ದು, ಯುವತಿಯ ಕುಟುಂಬದವರು ಖರೀದಿಗೆ ನಿರಾಕರಿಸಿದ್ದಕ್ಕೆ ನಿಶ್ಚಯವಾಗಿದ್ದ ಮದುವೆಯೊಂದು ನಿಂತು ಹೋಗಿದೆ.
ಜಿಲ್ಲೆಯ ತುರುವೇಕೆರೆಯ ಸುಮಿತ್ ಹಾಗೂ ತುಮಕೂರಿನ ಚಂದ್ರಕಲಾಗೆ ಜುಲೈ ತಿಂಗಳಿನಲ್ಲಿ ನಿಶ್ಚಿತಾರ್ಥವಾಗಿತ್ತು. ಎರಡು ಕುಟುಂಬದ ಹಿರಿಯರು ಆಗಸ್ಟ್ 29ರ ರಾತ್ರಿ(ಇಂದು) ತುಮಕೂರಿನ ಚಿಲುಮೆ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ, ಗುರುವಾರ ಮದುವೆ ಮಾಡಲು ನಿರ್ಧರಿಸಿದ್ದರು.
ಮದುವೆಗೆ 15 ದಿನ ಮುಂಚಿತವಾಗಿ ಆಭರಣ, ಬಟ್ಟೆ ಖರೀದಿಗೆ ಹೋಗಿದ್ದರು. ಆಗ ದುಬಾರಿ ಸೀರೆಯನ್ನು ಕೊಡಿಸಬೇಕು ಅಂತಾ ಸುಮಿತ್, ಚಂದ್ರಕಲಾ ಸಂಬಂಧಿಕರಿಗೆ ಒತ್ತಾಯಿಸಿದ್ದನು. ಆದರೆ ಅಷ್ಟು ದುಬಾರಿ ಸೀರೆ ಖರೀದಿ ಮಾಡಲು ನಮ್ಮಿಂದ ಆಗುವುದಿಲ್ಲ ಎಂದು ಚಂದ್ರಕಲಾ ಪೋಷಕರು ಹೇಳಿದ್ದಾರೆ. ಸೀರೆಯಿಂದ ಪ್ರಾರಂಭವಾದ ಜಗಳ ಎರಡೂ ಕುಟುಂಬಗಳ ಮನಸ್ತಾಪಕ್ಕೆ ಕಾರಣವಾಗಿತ್ತು. ಗಲಾಟೆ ನಡೆದಿದ್ದರಿಂದ ಸುಮಿತ್ ಮದುವೆಯನ್ನು ನಿರಾಕರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಮಿತ್‍ಗೆ ಈಗಾಗಲೇ ಚಂದ್ರಕಲಾ ಕುಟುಂಬದವರು ವರದಕ್ಷಣೆ ನೀಡಿದ್ದಾರಂತೆ. ಜೊತೆಗೆ ಸುಮಿತ್ ಸಂಶಯ ಸ್ವಭಾವ ಹೊಂದಿದ್ದ. ಇದರಿಂಗಾಗಿ ಮದುವೆ ನಿಂತಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಸುಮಿತ್ ಕುಟುಂಬದವರ ವಿರುದ್ಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಚಂದ್ರಕಲಾ ದೂರು ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/-UtNmauOMVg