– ವಾಸವಾಗದೇ ಇದ್ರೂ ಬಾಡಿಗೆ ಮನೆಯ ನಕಲಿ ಒಪ್ಪಂದ ಪತ್ರ ಸಲ್ಲಿಕೆ
– ಮುಕುಳೆಪ್ಪ ಹಿಂದೂ ಧರ್ಮಕ್ಕೆ ಬರುವಂತೆ ಗಾಯತ್ರಿ ತಾಯಿ ಆಗ್ರಹ
ಹುಬ್ಬಳ್ಳಿ: ಯೂಟ್ಯೂಬರ್ ಮುಕುಳೆಪ್ಪ ಮದುವೆ ವಿವಾದ (Mukaleppa Marriage Controversy) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಖಾಜ್ವಾ ಮತ್ತು ಗಾಯತ್ರಿ (Gayathri) ನಕಲಿ ದಾಖಲೆಗಳನ್ನು ನೀಡಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ವಿಶೇಷ ಮದುವೆ ಕಾಯ್ದೆಯ ಅಡಿ (Special Marriage Act) ಮದುವೆಯಾಗಿರುವುದಕ್ಕೆ ಗಾಯತ್ರಿ ಕುಟುಂಬಸ್ಥರು ಮತ್ತು ಶ್ರೀರಾಮಸೇನೆ (Srirma Sene) ದಾಖಲೆ ಬಿಡುಗಡೆ ಮಾಡಿದೆ.
ಉಪ ನೋಂದಣಿ ಕಚೇರಿ ಸಲ್ಲಿಕೆ ಮಾಡಿರುವ ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಗಾಯತ್ರಿ ಕುಟುಂಬಸ್ಥರು ಮತ್ತು ಶ್ರೀರಾಮಸೇನೆ, ಮುಕುಳೆಪ್ಪ ಬಂಧನಕ್ಕೆ ಆಗ್ರಹಿಸಿದೆ. ಮುಕುಳೆಪ್ಪ ಮತಾಂತರ ಮಾಡಿಲ್ಲ ಅಂತ ಹೇಳಿಕೆ ನೀಡಿದ್ದಾನೆ. ಆದರೆ ಯುವತಿಗೆ ತಾಳಿ ಹಾಕಿಲ್ಲ ಕೈ ಮೇಲೆ ಉರ್ದು ಅಕ್ಷರದಲ್ಲಿ ಹೆಸರನ್ನು ಬರೆಸಿದ್ದಾನೆ ಎಂದು ಸಂಘಟನೆಗಳು ಆರೋಪಿಸಿವೆ.
ಸುಳ್ಳು ದಾಖಲೆ ಸಲ್ಲಿಕೆ:
ಮುಕುಳೆಪ್ಪ ಧಾರವಾಡ, ಗಾಯತ್ರಿ ಹುಬ್ಬಳ್ಳಿ ನಿವಾಸಿಯಾಗಿದ್ದು ಆರಂಭದಲ್ಲಿ ಮುಂಡಗೋಡ ಉಪ ನೋಂದಣಿ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಸಲ್ಲಿಕೆ ಮಾಡಿದ ದಾಖಲೆಗಳು ಸರಿಯಾಗಿರದ ಕಾರಣ ಅರ್ಜಿ ತಿರಸ್ಕೃತಗೊಂಡಿವೆ. ಇದನ್ನೂ ಓದಿ: ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ, ಇಬ್ಬರೂ ಇಷ್ಟಪಟ್ಟು ಮದುವೆಯಾಗಿದ್ದೇವೆ: ಯೂಟ್ಯೂಬರ್ ಮುಕಳೆಪ್ಪ
ಮದುವೆ ವಿಚಾರ ಜೋರಾಗಿ ವಿವಾದವಾಗುತ್ತಿದ್ದಂತೆ ಉಪ ನೋಂದಣಿ ಕಚೇರಿಗೆ ಸಲ್ಲಿಕೆ ಮಾಡಿದ ದಾಖಲೆಗಳನ್ನು ಗಾಯತ್ರಿ ಕುಟುಂಬಸ್ಥರು ಪಡೆದುಕೊಂಡಿದ್ದಾರೆ. ಈ ವೇಳೆ ಶ್ರೀರಾಮ ಸೇನೆಯವರು ತನಿಖೆಗೆ ಇಳಿದಾಗ ಏಪ್ರಿಲ್ 28 ರಂದು ಟ್ರಿನಿಟಿ ಹಾಲ್‌ನಲ್ಲಿ ಮದುವೆಯಾಗದೇ ಇರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಮುಂಡಗೋಡ ಗಾಂಧಿನಗರದ ಬಾಡಿಗೆ ಮನೆಯಲ್ಲೂ ನೆಲೆಸದೇ ಇರುವ ವಿಚಾರವೂ ಗೊತ್ತಾಗಿದೆ. ಇದರ ಜೊತೆ ಸುಳ್ಳು ಸಾಕ್ಷಿಗಳ ಸಹಿಯನ್ನು ಹಾಕಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್
ಮುಕುಳೆಪ್ಪ ಸುಳ್ಳು ದಾಖಲೆ ನೀಡಿ ಮದುವೆಯಾಗಿದ್ದಾನೆ. ಸುಳ್ಳು ದಾಖಲೆ ನೀಡಿ ಮದುವೆಯಾದ ಮುಕುಳೆಪ್ಪನನ್ನು ಬಂಧಿಸಬೇಕು. ದಾಖಲೆಗಳನ್ನು ಪರಿಶೀಲನೆ ಮಾಡದೇ ಈ ಮದುವೆಯನ್ನು ಮಾನ್ಯ ಮಾಡಿದ ಸಬ್ ರಿಜಿಸ್ಟರ್ ಮತ್ತು ಕಚೇರಿ ಸಿಬ್ಬಂದಿ ಸೇರಿ ಎಲ್ಲರನ್ನ ಬಂಧನ ಮಾಡಬೇಕು ಎಂದು ಶ್ರೀರಾಮಸೇನೆ ಲವ್ ಜಿಹಾದ್ ತಡೆ ಸಮಿತಿ ಅಧ್ಯಕ್ಷ ಬಸವರಾಜ ಗೌಡರ ಆಗ್ರಹಿಸಿದ್ದಾರೆ.
ತನ್ನ ಮಗಳ ವಿರುದ್ಧ ಮತ್ತೊಮ್ಮೆ ತಾಯಿ ಶಿವಕ್ಕ, ನನ್ನ ಮಗಳು ಬೇಕು ಅಂದರೆ ಮುಕುಳೆಪ್ಪ ಮುಸ್ಲಿಂ ಧರ್ಮ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರ ಆಗಲಿ. ಹಿಂದೂ ಧರ್ಮಕ್ಕೆ ಖ್ವಾಜಾ ಬರಬೇಕು, ನಮ್ಮ ಆಚಾರ ವಿಚಾರ ಕಲಿಯಬೇಕು ಆಗ ನಾನು ಮದುವೆಗೆ ಒಪ್ಪುತ್ತೇನೆ. ಮುಕುಳೆಪ್ಪ ಕಲಾವಿದರಿಗೆ ಜಾತಿ ಧರ್ಮ ಇಲ್ಲ ಎನ್ನುತ್ತಾನೆ. ಆದರೆ ನನ್ನ ಮಗಳನ್ನು ಈಗಾಗಲೇ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ನನ್ನ ಮಗಳು ಸುರಕ್ಷಿತವಾಗಿಲ್ಲ ನನ್ನ ಮಗಳಿಗೆ ಖ್ವಾಜಾ ಮನೆಯಲ್ಲಿ ಪ್ರಾಣಾಪಾಯವಿದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ.