ಅಪ್ರಾಪ್ತನ ಜೊತೆ ದಿನಕ್ಕೆ 8-10 ಬಾರಿ ಆಂಟಿಯ ಸೆಕ್ಸ್ – ಮತ್ತೆ ಬೇಕು ಎಂದಿದ್ದಕ್ಕೆ ಕೊಲೆ

Public TV
3 Min Read

– ನಗ್ನವಾಗಿ ಬಾಲಕನ ಪಕ್ಕ ಮಲಗುತ್ತಿದ್ದ 3 ಮಕ್ಕಳ ತಾಯಿ
– ಬೆಡ್‍ರೂಮಿನಲ್ಲಿ ರೆಡ್‍ ಹ್ಯಾಂಡಾಗಿ ಪತಿಗೆ ಸಿಕ್ಕಿಬಿದ್ಳು

ಚೆನ್ನೈ: ಮದುವೆಯಾಗಿ ಮೂರು ಮಕ್ಕಳಿದ್ದರೂ 14ರ ಬಾಲಕನನ್ನು ಸೆಕ್ಸ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದಳು. ಆಕೆಯ ಕಿರುಕುಳವನ್ನು ಸಹಿಸಲಾಗಿದೆ ಬಾಲಕನೇ ಆಕೆಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಶೀಲಾದೇವಿ (35) ಕೊಲೆಯಾದ ಮಹಿಳೆ. ಅಕ್ರಮ ಸಂಬಂಧ ಹೊಂದಿದ್ದ 14ರ ಬಾಲಕನೇ ಕತ್ತು ಸೀಳಿ ಪರಾರಿಯಾಗಿದ್ದನು. ಇದೀಗ ಪೊಲೀಸರು ಆತನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಪ್ರಕರಣ?
ಶೀಲಾ ದೇವಿ ಕೆಲವು ವರ್ಷಗಳ ಹಿಂದೆ ಬಿಹಾರದ ಮಿಥುನ್ (35) ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂವರು ಮಕ್ಕಳಿದ್ದರು. ಕೆಲಸಕ್ಕಾಗಿ ಮಿಥುನ್ ಪತ್ನಿ ಮತ್ತು ಮಕ್ಕಳೊಂದಿಗೆ ತಮಿಳುನಾಡಿನ ತಿರುವರೂರಿಗೆ ಬಂದಿದ್ದರು. ಇಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಕೊಂಗುನೂರ್ ಮುಖ್ಯ ರಸ್ತೆಯಲ್ಲಿ ಮನೆ ಮಾಡಿಕೊಂಡಿದ್ದರು. ಬಿಹಾರ ಮೂಲದ 14 ವರ್ಷದ ಬಾಲಕ ಅದೇ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಬನಿಯಾನ್ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು.

ಈ ಹಂತದಲ್ಲಿ ಶೀಲಾದೇವಿ ಮತ್ತು ಬಾಲಕನೊಂದಿಗೆ ಪರಿಚಯವಾಗಿದ್ದು, ಆತ ಕೂಡ ಅಂಕಲ್, ಆಂಟಿ ಎಂದು ಹೆಚ್ಚಿನ ಸಮಯ ಅವರೊಂದಿಗೆ ಕಳೆಯಲು ಆರಂಭಿಸಿದ್ದ. ಇತ್ತ ಮಿಥುನ್ ಹೆಚ್ಚಾಗಿ ನೈಟ್ ಡ್ಯೂಟಿ ಮಾಡುತ್ತಿದ್ದ ಕಾರಣ ಹಲವು ಬಾರಿ ಬಾಲಕ ಅವರ ಮನೆಯಲ್ಲೇ ಉಳಿದುಕೊಂಡಿದ್ದ. ಈ ವೇಳೆ ಶೀಲಾದೇವಿ ಹುಡುಗನೊಂದಿಗೆ ಹೆಚ್ಚು ಸಲುಗೆ ಬೆಳೆಸಿಕೊಂಡಿದ್ದಳು. ಇಬ್ಬರ ನಡುವಿನ ಈ ಸಲುಗೆ ಕೆಲ ದಿನಗಳ ಬಳಿಕ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಪತಿ ರಾತ್ರಿ ಕೆಲಸಕ್ಕೆ ಹೋದ ನಂತರ ಶೀಲಾದೇವಿ ಮಕ್ಕಳನ್ನು ಬೇರೊಂದು ರೂಮ್‍ನಲ್ಲಿ ಮಲಗಿಸುತ್ತಿದ್ದಳು. ನಂತರ ಬಾಲಕನಿಗೆ ಆಮಿಷವೊಡ್ಡಿ ಸೆಕ್ಸ್ ಮಾಡುತ್ತಿದ್ದಳು. ಈ ನಡುವೆ ಒಮ್ಮೆ ಮನೆಗೆ ಆಗಮಿಸಿದ್ದ ಮಿಥುನ್‍ಗೆ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿತ್ತು. ರೂಮಿನಲ್ಲಿ ಮಕ್ಕಳು ಮಲಗಿದ್ದರು. ಆದರೆ ಪತ್ನಿ ಮಾತ್ರ ಹುಡುಗನೊಂದಿಗೆ ಅರೆನಗ್ನವಾಗಿ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಳು. ಇದರಿಂದ ಮಿಥುನ್ ಕೋಪಗೊಂಡು ಬಾಲಕನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಪತ್ನಿಗೆ ಬುದ್ಧಿವಾದ ಹೇಳಿ ಮತ್ತೆ ಇದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದ. ಆದರೆ ಪತಿಯ ಮಾತಿಗೆ ಬೆಲೆ ನೀಡಿದ ಶೀಲಾದೇವಿ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು.

ಈ ಕಾರಣದಿಂದ ದಂಪತಿಯ ಮಧ್ಯೆ ಜಗಳ ನಡೆಯುತ್ತಿತ್ತು. ಇದರಿಂದ ಮುಕ್ತಿ ಪಡೆಯಲು ಬಯಸಿದ್ದ ಪತಿ ಮಿಥುನ್ ಪತ್ನಿಯನ್ನು ಮತ್ತೆ ಬಿಹಾರ್ ಗೆ ಹೋಗೋಣ ಎಂದು ಹೇಳಿದ್ದ. ಆದರೆ ಪತ್ನಿ ಶೀಲಾದೇವಿ ಬಿಹಾರ್ ಹೋಗಲು ತಿರಸ್ಕರಿಸಿ ರಂಪಾಟ ಮಾಡಿದ್ದಳು. ಇತ್ತ ಪತ್ನಿಯ ಅವತಾರ ನೋಡಿ ಬೇಸರಗೊಂಡಿದ್ದ ಮಿಥುನ್ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ತನ್ನ ಸ್ವತಃ ಊರಿಗೆ ತೆರಳಿದ್ದ.

ಇತ್ತ ಪತಿ ಹಾಗೂ ಮಕ್ಕಳು ಮನೆಯಿಂದ ಹೊರ ನಡೆದ ಪರಿಣಾಮ ಮತ್ತಷ್ಟು ಸಂತಸ ಪಟ್ಟ ಶೀಲಾದೇವಿ ಬಾಲಕನನ್ನು ಮನೆಗೆ ಕರೆಯಿಸಿಕೊಂಡು ಅಲ್ಲೇ ಸಂಸಾರ ಮಾಡಲು ಮುಂದುವರಿಸಿದ್ದಳು. ಅಲ್ಲದೇ ಬಾಲಕನನ್ನು ಕೆಲಸಕ್ಕೂ ಹೋಗಲು ಬಿಡಿದೆ ಪ್ರತಿದಿನ 8 ರಿಂದ 10 ಬಾರಿ ಆತನೊಂದಿಗೆ ಸೆಕ್ಸ್ ಮಾಡುತ್ತಿದ್ದಳು.

ಕೊಲೆ:
ಕಳೆದ ಶುಕ್ರವಾರ ಶೀಲಾದೇವಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು. ಆಗ ಆಕೆಯನ್ನು ಕತ್ತು ಕೊಯ್ದು ಕೊಲೆ ಮಾಡಿರುವುದು ಸ್ಪಷ್ಟವಾಗಿತ್ತು. ಘಟನೆ ಕುರಿತು ಸ್ಥಳೀಯರೊಂದಿಗೆ ಹೆಚ್ಚಿನ ವಿಚಾರಣೆ ನಡೆಸಿದ ವೇಳೆ, ಬಾಲಕ ಆಕೆಯೊಂದಿಗೆ ವಾಸಿಸುತ್ತಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆ ಬಳಿಕ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೊಲೆ ಹಿಂದಿನ ರಹಸ್ಯ ಬೆಳಕಿಗೆ ಬಂದಿತ್ತು.

ಅಂದು ಶೀಲಾದೇವಿ ಹುಡುಗನೊಂದಿಗೆ ಪಿಕ್‍ನಿಕ್‍ಗೆ ತೆರಳಿ ಮರಳಿ ಮನೆಗೆ ಆಗಮಿಸಿದ್ದಳು. ಮನೆಗೆ ಆಗಮಿಸಿದ ಕೂಡಲೇ ಹುಡುಗನ್ನು ಸೆಕ್ಸ್ ನಲ್ಲಿ ತೊಡಗುವಂತೆ ಕೋರಿದ್ದಳು. ಆದರೆ ಆತ ತನಗೆ ಧಣಿವಾಗಿದೆ ಸಾಧ್ಯವಿಲ್ಲ ಎಂದು ಆಕೆಯನ್ನು ತಿರಸ್ಕರಿಸಿದ್ದ. ಆತನ ಮಾತನ್ನು ಕೇಳದೆ ಶೀಲಾದೇವಿ ಬಟ್ಟೆಯನ್ನು ಬಿಚ್ಚಿ ಆತನ ಪಕ್ಕ ಮಲಗುವ ಮೂಲಕ ಮತ್ತೆ ಹುಡುಗನಿಗೆ ಪ್ರಚೋದನೆ ನೀಡಲು ಆರಂಭಿಸಿದ್ದಳು. ಆದರೆ ಶೀಲಾಳನ್ನು ಹುಡುಗ ತಳ್ಳಿಹಾಕಿದ್ದ. ಆದರೂ ಆಕೆ ಪದೇ ಪದೇ ಒತ್ತಾಯ ಮಾಡುತ್ತಿದ್ದಳು. ಇದರಿಂದ ಕೋಪಗೊಂಡ ಹುಡುಗ ಪಕ್ಕದಲ್ಲೇ ಇದ್ದ ಚಾಕುವಿನಿಂದ ಶೀಲಾದೇವಿಯ ಗಂಟಲು ಸೀಳಿ ಸ್ಥಳದಿಂದ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *