ಮಡಿಕೇರಿಯಲ್ಲಿ ಹೆಚ್ಚಿದ ಪ್ರವಾಸಿಗರ ದಂಡು- ಇರ್ಪು ಫಾಲ್ಸ್ ನೋಡಲು ಜನವೋ ಜನ

Public TV
1 Min Read

ಮಡಿಕೇರಿ: ಹೊಸ ವರ್ಷ ಪ್ರಾರಂಭವಾಗೋಕೆ ದಿನಗಣನೆ ಶುರುವಾಗಿದೆ. ಇನ್ನು ಪ್ರವಾಸಿಗರ ಹಾಟ್ ಫೇವರಿಟ್ ತಾಣ ಮಡಿಕೇರಿಯಲ್ಲೂ ನ್ಯೂ ಇಯರ್ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈಗಾಗಲೇ ಸಾವಿರಾರು ಪ್ರವಾಸಿಗರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ.

ಅದರಲ್ಲೂ ಇರ್ಪು ಫಾಲ್ಸ್ ನಲ್ಲಂತೂ ಪ್ರವಾಸಿಗರು ಸಖತಾಗಿ ಎಂಜಾಯ್ ಮಾಡುತ್ತಿದ್ದಾರೆ. ಮಡಿಕೇರಿಯಿಂದ 50 ಕಿಲೋಮೀಟರ್ ದೂರದಲ್ಲಿರೋ ಬ್ರಹ್ಮಗಿರಿತಪ್ಪಲಿನ ನಡುವಿನಿಂದ ಧುಮುಕುವ ಇರ್ಪು ಫಾಲ್ಸ್‍ನ ಅಂದ ಎಷ್ಟು ಹೇಳಿದರೂ ಮುಗಿಯಲ್ಲ.

ಇನ್ನು ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳು ಕಂಪ್ಲೀಟ್ ಆಗಿ ಬುಕ್ ಆಗಿವೆ. ಹೊಸ ವರ್ಷದ ಸಂಭ್ರಮದ ಹೆಸರಲ್ಲಿ ಯಾವುದೇ ಹುಚ್ಚಾಟ ನಡೀಬಾರ್ದು ಅನ್ನೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ. ರಾತ್ರಿ 12.30ರ ನಂತ್ರ ಮಡಿಕೇರಿಯಲ್ಲಿ ಎಲ್ಲಿಯೂ ನ್ಯೂಇಯರ್ ಸೆಲಬ್ರೇಷನ್ ಮಾಡುವಂತಿಲ್ಲ. ಅಲ್ಲದೇ ರಸ್ತೆಗಳಲ್ಲಿ ವಿಶ್ ಮಾಡೋ ಹೆಸರಲ್ಲಿ ಯಾರಿಗೂ ತೊಂದರೆ ನೀಡುವಂತಿಲ್ಲ. ಇದನ್ನೂ ಓದಿ: ಹೊಸವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ- ಮೊದಲ ಬಾರಿಗೆ ನಗರದೆಲ್ಲೆಡೆ ಖಾಕಿ ಪರೇಡ್

ಸಾರ್ವಜನಿಕ ಸ್ಥಳಗಳಲ್ಲಿ ಸೆಲಬ್ರೇಷನ್ ಮಾಡುವಂತಿಲ್ಲ. ಮುಖ್ಯವಾಗಿ ಹೋಂಸ್ಟೇಗಳಲ್ಲಿ ಲಿಕ್ಕರ್ ಸಪ್ಲೇ ಮಾಡುವಂತಿಲ್ಲವೆಂದು ಖಡಕ್ ಸೂಚನೆ ನೀಡಿದೆ. ರೆಸಾರ್ಟ್ ಹಾಗೂ ಹೋಂಸ್ಟೇಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲು ಖಾಕಿ ಪಡೆ ನಿಯೋಜಿಸಿದೆ.

Share This Article
Leave a Comment

Leave a Reply

Your email address will not be published. Required fields are marked *