ಅಣ್ಣ ತಂಗಿ ಸೀರಿಯಲ್‌ಗೆ ‘ಟಗರು’ ನಟಿ ಮಾನ್ವಿತಾ ಸಾಥ್

Public TV
1 Min Read

‘ಟಗರು’ (Tagaru) ಬ್ಯೂಟಿ ಮಾನ್ವಿತಾ ಹರೀಶ್ (Manvitha Harish) ಅವರು ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಕಿರುತೆರೆಯ ಸೀರಿಯಲ್‌ವೊಂದರಲ್ಲಿ ವಿಶೇಷ ಅತಿಥಿಯಾಗಿ ಮಾನ್ವಿತಾ ಸಾಥ್ ನೀಡಿದ್ದಾರೆ.

ಕೆಂಡಸಂಪಿಗೆ, ಟಗರು, ಚೌಕ, ಶಿವ 143 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಮಾನ್ವಿತಾ ಗಮನ ಸೆಳೆದರು. ಮಾನ್ವಿತಾ ಅವರ ತಾಯಿ ಸುಜಾತ ಕಾಮತ್ ಏ.14ರಂದು ಕಿಡ್ನಿ ಫೆಲ್ಯೂರ್‌ನಿಂದ ನಿಧನರಾದರು. ತಾಯಿ ಅಗಲಿಕೆ ನೋವಿನ ನಡುವೆಯೇ ಮಾನ್ವಿತಾ ಕ್ಯಾಮೆರಾ ಮುಂದೆ ಬಂದಿದ್ದಾರೆ.

ಅಮ್ಮ ಐ ಲವ್ ಯು, ಆ ದಿನಗಳು, ಆಟಗಾರ, ಚಿತ್ರಗಳ ನಿರ್ದೇಶಕ ಕೆ.ಎಮ್ ಚೈತನ್ಯ ಅವರ ನಿರ್ಮಾಣದ ‘ಅಣ್ಣ ತಂಗಿ’ (Anna Thangi) ಸೀರಿಯಲ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ನಲ್ಲಿ ನಟಿ ಮಾನ್ವಿತಾ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಎಂಟ್ರಿಯಿಂದ ಧಾರಾವಾಹಿಗೆ ಹೊಸ ಟ್ವಿಸ್ಟ್ ಕೂಡ ಸಿಗಲಿದೆ. ಈ ಬಗ್ಗೆ ನಟಿ ಮಾನ್ವಿತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ:ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

ಈಗಾಗಲೇ ಲವ್ಲಿ ಸ್ಟಾರ್ ಪ್ರೇಮ್‌ಗೆ (Prem) ನಾಯಕಿಯಾಗಿ ಮಾನ್ವಿತಾ ಕಾಮತ್ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಇನ್ನೂ ನಿರ್ದೇಶನದ ಕಡೆಗೂ ಮಾನ್ವಿತಾಗೆ ಒಲವಿದೆ. ಈ ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಮಾನ್ವಿತಾ ಅಪ್‌ಡೇಟ್ ನೀಡಲಿದ್ದಾರೆ.

Share This Article