ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ – 21 ದಿನದಲ್ಲಿ 2.48 ಕೋಟಿ ರೂ. ಕಾಣಿಕೆ ಸಂಗ್ರಹ

1 Min Read

ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಾರ್ಚ್ ತಿಂಗಳಿನ 21 ದಿನದ ಕಾಣಿಕೆ ಹುಂಡಿ ಎಣಿಕೆ (Hundi Counting) ಮುಕ್ತಾಯವಾಗಿದ್ದು, ಕಳೆದ 21 ದಿನದಲ್ಲಿ 2,48,28,737 ರೂ. ಕಾಣಿಕೆ ಸಂಗ್ರಹವಾಗಿದೆ.

ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಮಾರ್ಚ್ ತಿಂಗಳಿನ ಈ 21 ದಿನಗಳಲ್ಲಿ ಕೋಟ್ಯಂತರ ರೂ. ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಕಾಣಿಕೆಯಲ್ಲಿ 2,39,26,137 ರೂ. ಕರೆನ್ಸಿ ನೋಟುಗಳು. 9,2,600 ರೂ. ನಾಣ್ಯಗಳು ಸಂಗ್ರಹವಾಗಿವೆ. 14 ಗ್ರಾಂ ಚಿನ್ನ, 2,163 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ

ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ರಾತ್ರಿ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಭಕ್ತರು, ಕರ ಸೇವಕರು ಭಾಗವಹಿಸಿದ್ದರು. ಇದನ್ನೂ ಓದಿ: ರಾಯಚೂರಿನಲ್ಲಿ ರೊಟ್ಟಿ ಕೇಂದ್ರಗಳಿಗೆ ತಟ್ಟಿದ ಗ್ಯಾಸ್ ಸಿಲಿಂಡರ್ ಬಿಸಿ

Share This Article