ಕೈದಿಗಳಿಗೆ ಮಂತ್ರಾಕ್ಷತೆ, ರಾಮ ಕಥಾ ಪುಸ್ತಕ ವಿತರಣೆ – ವಿಭಿನ್ನ ಆಚರಣೆಗೆ ಸಾಕ್ಷಿಯಾಯ್ತು ಚಾಮರಾಜನಗರದ ಜೈಲು

Public TV
1 Min Read

ಚಾಮರಾಜನಗರ: ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾಮರಾಜನಗರ ಬಂಧಿಖಾನೆ ವಿಭಿನ್ನ ಆಚರಣೆಗೆ ಸಾಕ್ಷಿಯಾಗಿದೆ.

ವಿಚಾರಣಾಧೀನ ಕೈದಿಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ, ರಾಮ ಕಥಾ ಮಹಿಮೆ ಪುಸ್ತಕ ಹಾಗೂ ತುಳಸಿಮಾಲೆ ವಿತರಿಸಲಾಗಿದ್ದು ಕೈದಿಗಳ ಬಾಯಲ್ಲಿ ರಾಮ ನಾಮ ಜಪ ಮೂಡಿಬಂದಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣಗೆ ಅಗ್ನಿ ಪರೀಕ್ಷೆ; ಚುನಾವಣೆಯಲ್ಲಿ ಅಕ್ರಮ ಆರೋಪ ಪ್ರಕರಣ ಸುಪ್ರೀಂನಲ್ಲಿ ಇಂದು ವಿಚಾರಣೆ

ನಗರದ ಜನಾರ್ಧನ ಪ್ರತಿಷ್ಠಾನ ಆಯೋಜಿಸಿದ್ದ ಈ ವಿಭಿನ್ನ ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳೂ ಆದ ನ್ಯಾಯಾಧೀಶ ಎಂ.ಶ್ರೀಧರ್ ಭಾಗಿಯಾಗಿ ಕೈದಿಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ, ರಾಮ ಕಥಾ ಮಹಿಮೆ ಪುಸ್ತಕ, ತುಳಸಿ ಜಪಮಾಲೆ ವಿತರಿಸಿದರು. ಇದನ್ನೂ ಓದಿ: Annapoorni: ರಾಮನ ಕುರಿತು ವಿವಾದಾತ್ಮಕ ಡೈಲಾಗ್- ಕೊನೆಗೂ ಮೌನ ಮುರಿದ ನಯನತಾರಾ

ಯಾವುದೋ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಮನಃ ಪರಿವರ್ತನೆಯಾಗಿ ಹೊಸ ಜೀವನ ನಡೆಸಿ ಎಂದು ನ್ಯಾಯಾಧೀಶರು ತಿಳಿಹೇಳಿದರು. ಕೈದಿಗಳಿಗೆ ಜನಾರ್ಧನ ಪ್ರತಿಷ್ಠಾನದ ಅರ್ಚಕ ಅನಂತ್ ಪ್ರಸಾದ್‌ರಿಂದ ರಾಮ ನಾಮ ಮಂತ್ರ ಬೋಧನೆ ಮಾಡಿಸಲಾಯಿತು. ರಾಮನಾಮ ಜಪಿಸಿದ ಕೈದಿಗಳು ಭಾವುಕರಾದರು ಕಾರ್ಯಕಮಕ್ಕೂ ಮುನ್ನ ಹರಳುಕೋಟೆ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಇದನ್ನೂ ಓದಿ: ಆನೇಕಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡ ಕುಸಿತ – 20ಕ್ಕೂ ಹೆಚ್ಚು ಕಾರ್ಮಿಕರು ಗಂಭೀರ 

Share This Article