ಕಮಲ್‌ ಹಾಸನ್‌, ಮೋಹನ್‌ ಲಾಲ್‌, ಮಮ್ಮುಟ್ಟಿ ನಟನೆಯ ‘ಮನೋರಥಂಗಳ್’ ಚಿತ್ರದ ಟ್ರೈಲರ್ ಔಟ್

Public TV
2 Min Read

ಲಯಾಳಂನ ಅಚ್ಚುಮೆಚ್ಚಿನ ಬರಹಗಾರ, ಚಿತ್ರಕಥೆಗಾರ ಮತ್ತು ನಿರ್ದೇಶಕ ಎಂ.ಟಿ ವಾಸುದೇವನ್ ನಾಯರ್ ಅವರ ಹುಟ್ಟುಹಬ್ಬದ (ಜು.15) ಪ್ರಯುಕ್ತ ‘ಮನೋರಥಂಗಳ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. 9 ಕಥೆಗಳಿರುವ ಈ ಆಂಥಾಲಜಿಗೆ 8 ಮಂದಿ ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಎಂಟಿ ವಾಸುದೇವನ್ ನಾಯರ್ ಕಥೆ ಬರೆದಿದ್ದಾರೆ. ಮಲಯಾಳಂ ಚಿತ್ರರಂಗದ ಸ್ಟಾರ್ ನಟರ ದಂಡೇ ಈ ಸಿನಿಮಾದಲ್ಲಿದೆ. ಇದನ್ನೂ ಓದಿ:‘ಬ್ಯಾಚುರಲ್ ಪಾರ್ಟಿ’ ಕಾಪಿರೈಟ್ ಕೇಸ್: ಕಾನೂನು ಹೋರಾಟ ಮಾಡುತ್ತೇನೆ ಎಂದ ರಕ್ಷಿತ್ ಶೆಟ್ಟಿ

ಸದ್ಯ ಬಿಡುಗಡೆ ಆಗಿರುವ ‘ಮನೋರಥಂಗಳ್’ (Manorathangal) ಸಿನಿಮಾ ಆಗಸ್ಟ್ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಹಾಗಾದರೆ, ಯಾವೆಲ್ಲ ಸಣ್ಣ ಕಥೆಗಳು ಈ ಸಿನಿಮಾದಲ್ಲಿ ಅಡಕವಾಗಿವೆ? ಯಾರೆಲ್ಲ ಸ್ಟಾರ್ ನಟರಿದ್ದಾರೆ? ನಿರ್ದೇಶಕರು ಯಾರು ಎಂಬ ಮಾಹಿತಿ ಇಲ್ಲಿದೆ. ವಿಶೇಷ ಏನೆಂದರೆ, ಈ ಚಿತ್ರದ ಟ್ರೈಲರ್ ಕಮಲ್ ಹಾಸನ್ ಸಹ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿಯೂ ಅವರದ್ದು ವಿಶೇಷ ಪಾತ್ರವಿದೆ.

‘ಮನೋರಥಂಗಳ್’ ಚಿತ್ರದಲ್ಲಿ ಕಮಲ್ ಹಾಸನ್ (Kamal Haasan), ಮೋಹನ್ ಲಾಲ್ (Mohan Lal), ಮಮ್ಮುಟ್ಟಿ, ಫಹಾದ್ ಫಾಸಿಲ್, ಪಾರ್ವತಿ ತಿರುವೋತ್ತು, ಹರೀಶ್ ಉತ್ತಮನ್, ಬಿಜು ಮೆನನ್, ಶಾಂತಿ ಕೃಷ್ಣ, ಜಾಯ್ ಮ್ಯಾಥ್ಯೂ, ಮಧು, ಆಸಿಫ್ ಅಲಿ, ನದಿಯಾ ಮೊಯ್ದು, ಕೈಲಾಸ, ಇಂದ್ರನ್ಸ್, ನೆಡುಮುಡಿ ವೇಣು, ರಣಜಿ ಪಣಿಕ್ಕರ್, ಸುರಭಿ ಲಕ್ಷ್ಮಿ, ಸಿದ್ದಿಕ್, ಇಶಿತ್ ಯಾಮಿನಿ, ನಾಸೀರ್, ಇಂದ್ರಜಿತ್, ಅಪರ್ಣಾ ಬಾಲಮುರಳಿ ಬಣ್ಣ ಹಚ್ಚಿದ್ದಾರೆ.

ಜೀ5 ನಿರ್ಮಾಣ ಮಾಡಿರುವ ಈ ಸಿನಿಮಾ ಆಗಸ್ಟ್ 15ರಂದು ಪ್ರೀಮಿಯರ್ ಆಗಲಿದೆ. ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿರುತ್ತದೆ. ಒಂಭತ್ತು ಕಥೆಗಳಿಗೆ 8 ಮಂದಿ ನಿರ್ದೇಶಕರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೋಹನ್‌ಲಾಲ್ ನಟಿಸಿರುವ ಪ್ರಿಯದರ್ಶನ್ ನಿರ್ದೇಶಿಸಿದ ‘ಒಲ್ಲವುಮ್ ತೀರವುಮ್’ ಕಪ್ಪು ಬಿಳುಪಿನಲ್ಲಿ ಮೂಡಿ ಬಂದಿದೆ. ರಂಜಿತ್ ನಿರ್ದೇಶನದಲ್ಲಿ ‘ಕಾಡುಗನ್ನವ ಒರು ಯಾತ್ರೆ ಕುರಿಪ್ಪು’ ಕಥೆಯಲ್ಲಿ ನಟ ಮಮ್ಮುಟ್ಟಿ ನಟಿಸಿದ್ದಾರೆ. `ಶಿಲಾಲಿಖಿತಂ’ ಪ್ರಿಯದರ್ಶನ್ ನಿರ್ದೇಶನದ ಈ ಕಥೆಯಲ್ಲಿ ಬಿಜು ಮೆನನ್, ಶಾಂತಿಕೃಷ್ಣ ಮತ್ತು ಜಾಯ್ ಮ್ಯಾಥ್ಯೂ ನಟಿಸಿದ್ದಾರೆ. ಶ್ಯಾಮಪ್ರಸಾದ್ ನಿರ್ದೇಶನದ ‘ಕಜ್ಚಾ’ ಚಿತ್ರದಲ್ಲಿ ಪಾರ್ವತಿ ತಿರುವೋತ್ತು ಮತ್ತು ಹರೀಶ್ ಉತ್ತಮನ್ ನಟಿಸಿದ್ದಾರೆ. `ವಿಲ್ಪನಾ’ ಮಾಧೂ ಮತ್ತು ಆಸಿಫ್ ಅಲಿ ನಟಿಸಿರುವ ಕಥೆಯನ್ನು ಅಶ್ವತಿ ನಾಯರ್ ನಿರ್ದೇಶಿಸಿದ್ದಾರೆ.

ಅಭಿನವ ಮಹೇಶ್ ನಾರಾಯಣನ್ ನಿರ್ದೇಶಿಸಿದ ಫಹಾದ್ ಫಾಸಿಲ್ ಮತ್ತು ಜರೀನಾ ಮೊಯ್ದು ಜೋಡಿ ‘ಶರ್ಲಾಕ್’ ಕಥೆಯಲ್ಲಿ ಕಾಣಿಸಿಕೊಂಡಿದೆ. ‘ಸ್ವರ್ಗಂ ತುರಕ್ಕುನ್ನ ಸಮಯ’ ಜಯರಾಜನ್ ನಾಯರ್ ನಿರ್ದೇಶನದಲ್ಲಿ ಕೈಲಾಶ್, ಇಂದ್ರನ್ಸ್, ನೆಡುಮುಡಿ ವೇಣು, ಎಂಜಿ ಪಣಿಕ್ಕರ್ ಮತ್ತು ಸುರಭಿ ಲಕ್ಷ್ಮಿ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಅಭ್ಯಾಮ್ ತೀಡಿ ವೀಂದುಂ’ ಸಿದ್ಧಿಕ್, ಇಶಿತ್ ಯಾಮಿನಿ ಮತ್ತು ನಜೀರ್ ಈ ಕಥೆಯಲ್ಲಿ ನಟಿಸಿದ್ದಾರೆ, ಸಂತೋಷ್ ಶಿವನ್ ನಿರ್ದೇಶಿಸಿದ್ದಾರೆ. ‘ಕಡಲ್‌ಕಾಟ್ಟು’ ರತೀಶ್ ಅಂಬಾಟ್ ನಿರ್ದೇಶನದ ಈ ಕಥೆಯಲ್ಲಿ ಇಂದ್ರಜಿತ್ ಮತ್ತು ಅಪರ್ಣಾ ಬಾಲಮುರಳಿ ನಟಿಸಿದ್ದಾರೆ.

Share This Article