ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ ಈಗಿನಂತೆ ಗಡಿ ಸಮಸ್ಯೆ ಇದ್ದಿದ್ರೆ ರಾಜೀನಾಮೆ ಕೊಡ್ತಿದ್ರು: ಮೋದಿ ವಿರುದ್ಧ ರಾಗಾ ವಾಗ್ದಾಳಿ

Public TV
1 Min Read

ನವದೆಹಲಿ: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈಗಿನಂತೆ ಭಾರತ-ಚೀನಾ ಗಡಿ ಸಮಸ್ಯೆ ಇದ್ದಿದ್ದರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಚೀನಾವು ಭಾರತದ ಭೂಮಿಯನ್ನು ಅಕ್ರಮಿಸಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು. ಆದರೆ ಚೀನಾ, ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡರೂ ಮೋದಿ ಸುಮ್ಮನಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಜನಪ್ರತಿನಿಧಿಗಳು

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಗುಂಪು ದ್ವೇಷವನ್ನು ಹರಡುತ್ತಿದೆ. ಇದನ್ನು ಪ್ರೀತಿಯಿಂದ ಎದುರಿಸಬೇಕಾಗಿದೆ. ಕಾಂಗ್ರೆಸ್‌ನ ಸಿದ್ಧಾಂತಗಳು ದೇಶದ ಜನರನ್ನು ತಲುಪುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹುಸಿ ರಾಷ್ಟ್ರೀಯತೆ ಪ್ರಚಾರಗಳ ವಿರುದ್ಧ ನಾವು ಒಟ್ಟುಗೂಡಬೇಕು ಎಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್ ಧರ್ಮ ರಾಜಕಾರಣ ಮಾಡುತ್ತಿವೆ. ಅವರಿಗೆ ಬೇರೆ ಏನೂ ಕೆಲಸ ಇಲ್ಲ. ಕಾಂಗ್ರೆಸ್ ಈ ದೇಶದ ಜನರ ಹೃದಯವನ್ನು ಗೆದ್ದಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

Share This Article
Leave a Comment

Leave a Reply

Your email address will not be published. Required fields are marked *