ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

Public TV
2 Min Read

ಮುಂಬೈ/ಪಣಜಿ: ಟೀಂ ಇಂಡಿಯಾದ ಆಟಗಾರ ಮನೀಷ್ ಪಾಂಡೆ (Manish Pandey) ತನ್ನ ಕೆರಿಯರ್‌ನ 100ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್‌ನಲ್ಲಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಟೀಂ ಇಂಡಿಯಾ ಟಿ20 ಉಪನಾಯಕನಾದ ಮೊದಲ ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ.

ಗೋವಾ ವಿರುದ್ಧದ ರಣಜಿ ಟ್ರೋಫಿ (Ranji Trophy) ಕ್ರಿಕೆಟ್ (Cricket) ಪಂದ್ಯದ 2ನೇ ದಿನದಾಟದಲ್ಲಿ ಅಬ್ಬರಿಸಿದ ಮನೀಷ್ ಪಾಂಡೆ ಔಟಾಗದೆ 208 ರನ್ ಚಚ್ಚಿದ್ದಾರೆ. 14 ಬೌಂಡರಿ ಹಾಗೂ 11 ಸಿಕ್ಸರ್‌ಗಳು ಇದರಲ್ಲಿ ಸೇರಿವೆ. ಈ ಮೂಲಕ ಕರ್ನಾಟಕ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದಿದ್ದಾರೆ. ಇನ್ನೂ ಕನ್ನಡಿಗ ಮಯಾಂಕ್ ಅಗರ್ವಾಲ್ ಬಳಗ 7 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬುಧವಾರದ ಆಟದ ಅಂತ್ಯಕ್ಕೆ ಗೋವಾ ಮೊದಲ ಇನಿಂಗ್ಸ್‌ನಲ್ಲಿ  3 ವಿಕೆಟ್‌ಗೆ 146 ರನ್ ಗಳಿಸಿ, 457 ರನ್‌ಗಳ ಬೃಹತ್ ಹಿನ್ನಡೆ ಕಾಯ್ದುಕೊಂಡಿದೆ.

ಕರ್ನಾಟಕ ತಂಡ (Team India) 3 ವಿಕೆಟ್‌ಗೆ 294 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿತ್ತು. ಮೊದಲ ದಿನ ಎಂಟು ರನ್‌ಗಳೊಂದಿಗೆ ಅಜೇಯರಾಗುಳಿದಿದ್ದ ಪಾಂಡೆ, 2ನೇ ದಿನ ಭರ್ತಿ 200 ರನ್ ಕಲೆಹಾಕಿದರು. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

ಇನ್ನೊಂದೆಡೆ ಟೀಂ ಇಂಡಿಯಾದ (Team India) T20 ಉಪನಾಯಕನಾಗಿ ಕಣಕ್ಕಿಳಿರುವ ಸೂರ್ಯಕುಮಾರ್ ಯಾದವ್ ಸದ್ಯ ರಣಜಿ ಟ್ರೋಫಿಯಲ್ಲಿ ಅಬ್ಬರಿಸುತ್ತಿದ್ದಾರೆ. ರಣಜಿಯಲ್ಲೂ ಅದ್ಭುತ ಫಾರ್ಮ್ ಕಾಯ್ದುಕೊಂಡಿರುವ ಸೂರ್ಯಕುಮಾರ್ ಸೌರಾಷ್ಟ್ರ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 107 ಎಸೆತಗಳಿಗೆ 95 ರನ್‌ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾಗಿದ್ದಾರೆ. ಇದರಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸೇರಿವೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

ಇಂದು ಸೌರಾಷ್ಟ್ರ ವಿರುದ್ಧ ಮುಂಬೈ 2ನೇ ಇನ್ನಿಂಗ್ಸ್ ಮುಂದುವರಿಸಿದ್ದು, 16 ಓವರ್‌ಗಳಲ್ಲಿ 70 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಪೃಥ್ವಿ ಶಾ 41 ರನ್ (59 ಎಸೆತ, 6 ಬೌಂಡರಿ) ಗಳಿಸಿದ್ರೆ, ಸೂರ್ಯಕುಮಾರ್ 20 ರನ್ (25 ಎಸೆತ, 3 ಬೌಂಡರಿ) ಗಳಿಸಿ (1 ಗಂಟೆ ಸಮಯಕ್ಕೆ) ಕ್ರೀಸ್‌ನಲ್ಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *