1 ನಿಮಿಷದಲ್ಲಿ 105 ಪುಶ್-ಅಪ್ ಮಾಡಿ ದಾಖಲೆ ಸೃಷ್ಟಿಸಿದ ಯುವಕ!

Public TV
1 Min Read

ಇಂಫಾಲ್: ಮಣಿಪುರದ ಅಜ್ಟೆಕ್ಸ್ ಸ್ಪೋಟ್ರ್ಸ್ ನಡೆಸಿದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ 24 ವರ್ಷದ ಯುವಕ ಒಂದು ನಿಮಿಷದಲ್ಲಿ 105 ಪುಶ್-ಅಪ್ ಮಾಡುವ ಮೂಲಕ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಮಣಿಪುರದ ತೌನೊಜಮ್ ನಿರಂಜೋಯ್ ಸಿಂಗ್, ಎರಡು ಬಾರಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಒಂದು ನಿಮಿಷದಲ್ಲಿ ಅತಿ ಹೆಚ್ಚು ಪುಶ್-ಅಪ್‍ಗಳ ದಾಖಲೆ ಬರೆದಿದ್ದು, ಗಿನ್ನೆಸ್ ಬುಕ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. 13 ವರ್ಷಗಳ ನಂತರ ಭಾರತೀಯರೊಬ್ಬರು ಈ ದಾಖಲೆಯನ್ನು ಸಾಧಿಸಿದ್ದಾರೆ. ಈ ಸುದ್ದಿ ಕೇಳಿ ಭಾರತೀಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವ್ರಿಗೆ ಮಲೈಕಾ ಖಡಕ್ ಉತ್ತರ

ಯಾರಿದು?
2019 ರಲ್ಲಿ ಸಿಂಗ್ ಒಂದು ನಿಮಿಷದಲ್ಲಿ ಒನ್-ಆರ್ಮ್ ಲೆಗ್ ಪುಶ್-ಅಪ್‍ಗಳ ದಾಖಲೆಯನ್ನು ಮಾಡಿದ್ದರು. ಒಂದು ವರ್ಷದ ನಂತರ, ಮತ್ತೆ ಅವರು ಒಂದು ನಿಮಿಷದಲ್ಲಿ ಒನ್-ಆರ್ಮ್ ಲೆಗ್ ಪುಶ್-ಅಪ್‍ಗಳ ದಾಖಲೆ ಸೃಷ್ಟಿಸಿದ್ದಾರೆ. ಯುಕೆ ಗ್ರಹಾಂ ಮಾಲಿ 2009 ರಿಂದ ಒಂದು ನಿಮಿಷದಲ್ಲಿ ಅತಿ ಹೆಚ್ಚು ಪುಷ್-ಅಪ್‍ಗಳ ದಾಖಲೆಯನ್ನು ಬರೆದಿದ್ದರು. ಆದರೆ ಈಗ ಅವರನ್ನು ಮಣಿಪುರಿ ಯುವಕ ಹಿಂದಿಕ್ಕಿದ್ದಾನೆ.

ಮಣಿಪುರದ ಯುವಕರನ್ನು ಶ್ಲಾಘಿಸಿ, ಭಾರತದ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ, ಅತಿ ಹೆಚ್ಚು ಪುಷ್-ಅಪ್ ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ದಾಖಲೆ ಮಾಡಿದ ಮಣಿಪುರಿ ಯುವಕ ಟಿ.ನಿರಂಜೋಯ್ ಸಿಂಗ್ ಅಭಿನಂದನೆಗಳು. ಇದು ಅದ್ಭುತವಾಗಿದೆ. ನಿಮ್ಮ ಸಾಧನೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅವಧಿ ಮೀರಿ ವಾಸಗೃಹದಿಂದ ಕುಟುಂಬ ಹೊರಹಾಕಿದ್ದ ಪ್ರಕರಣ ಸುಖಾಂತ್ಯ – ಮೃತ ನೌಕರನ ಪುತ್ರನಿಗೆ ಗುತ್ತಿಗೆ ನೌಕರಿ

ಹಲವಾರು ರಾಜಕಾರಣಿಗಳು, ಫಿಟ್ನೆಸ್ ಉತ್ಸಾಹಿಗಳು ಮತ್ತು ನೆಟ್ಟಿಗರು ಸಿಂಗ್ ದೇಶಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *