ಮಣಿಪುರದಲ್ಲಿ ಅತಂತ್ರವಿದ್ದರೂ ಬಿಜೆಪಿ ಸರ್ಕಾರ

Public TV
1 Min Read

ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಸುಲಭವಾಗಿ ಕಮಲ ಅರಳಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್‍ಗಳು ಹೇಳಿದ್ದವು. ಅದು ನಿಜವಾಗಿದ್ದು ಮೊದಲು ಅತಂತ್ರದ ಮುನ್ಸೂಚನೆ ನೀಡಿದ್ದ ವೋಟಿಂಗ್ ಟ್ರೆಂಡ್ ನಿಧಾನಕ್ಕೆ ಬಿಜೆಪಿ ಕಡೆಗೆ ತಿರುಗಿತು.

ಮಣಿಪುರದಲ್ಲಿ ಬಿಜೆಪಿ ಸಿಂಪಲ್ ಮೆಜಾರಿಟಿ ಗಳಿಸಿದೆ. ಈ ಮೂಲಕ ಮತ್ತೊಮ್ಮೆ ಬೀರೆನ್ ಸಿಂಗ್ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಇಲ್ಲಿಯೂ ಮಕಾಡೆ ಮಲಗಿದೆ. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‍ಗಿಂತ ಹೆಚ್ಚು ಸ್ಥಾನ ಗಳಿಸಿ, ವಿಪಕ್ಷವಾಗಿ ಹೊರಹೊಮ್ಮಿವೆ. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್

ಯಾರಿಗೂ ಸಿಗದ `ಮಣಿ’
ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
* ಬಿಜೆಪಿ – 26
* ಕಾಂಗ್ರೆಸ್ – 04
* ಎನ್‍ಪಿಎಫ್ – 05
* ಜೆಡಿಯು – 07
* ಕೆಪಿಎ – 02
* ಎನ್‍ಪಿಪಿ – 06
* ಇತರರು – 03

2017ರ ಫಲಿತಾಂಶ
ಬಿಜೆಪಿ 21, ಕಾಂಗ್ರೆಸ್ 28, ಇತರರು 11

Share This Article
Leave a Comment

Leave a Reply

Your email address will not be published. Required fields are marked *