ಚೆನ್ನೈ: ನಟ ವಿಜಯ್ ದಳಪತಿ ರ‍್ಯಾಲಿ ದುರಂತ (Vijay Rally Stampede) ಕಣ್ಣಾರೆ ಕಂಡ ಬೆಂಗಳೂರಿನ ಬನಶಂಕರಿ ನಿವಾಸಿ ಮಾಂಗೀಲಾಲ್, 10 ವರ್ಷದ ಬಾಲಕಿ ಸಾವನ್ನಪ್ಪಿದ್ದನ್ನು ನೆನೆದು ಭಾವುಕರಾಗಿದ್ದಾರೆ.
ಎರಡು ದಿನಗಳ ಹಿಂದೆ ಮಾಂಗೀಲಾಲ್ ಅವರು ಕರೂರಿಗೆ ತೆರಳಿದ್ದರು. ಶನಿವಾರ ನಡೆದ ಟಿವಿಕೆ (TVK) ಪಕ್ಷದ ರ‍್ಯಾಲಿಯ ದುರಂತಕ್ಕೆ ಸಾಕ್ಷಿಯಾದರು. ಈ ಬಗ್ಗೆ ಮಾತನಾಡಿ, ಕಾಲ್ತುಳಿತದಲ್ಲಿ ಬಾಲಕಿ ಸಾವನ್ನ ಕಣ್ಣಾರೆ ಕಂಡೆ. ಬಾಲಕಿ ಮುಖ ಪೂರ್ತಿ ಊದಿತ್ತು. ಯಾವುದೇ ವ್ಯವಸ್ಥೆ ಸರಿ ಇರಲಿಲ್ಲ. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್ ಮೊದಲ ಪ್ರತಿಕ್ರಿಯೆ
ವಿಜಯ್ ಬಂದಾಗ ಅವರು ಮಾತಾಡಿದ್ದು ಜನಕ್ಕೆ ಕೇಳುತ್ತಿರಲಿಲ್ಲ. ಜನ ಕೇಳುತ್ತಿಲ್ಲ ಕೇಳುತ್ತಿಲ್ಲ ಎಂದು ಜನ ಕೂಗುತ್ತಿದ್ದರು. ವಿಜಯ್‌ಗೂ ಜನ ಕೂಗುತ್ತಿರೋದು ಏನು ಎಂದು ಗೊತ್ತಾಗಿಲ್ಲ. ಕ್ಷಣಾರ್ಧದಲ್ಲಿ ಎಲ್ಲವೂ ನಡೆದು ಹೋಯ್ತು ಎಂದಿದ್ದಾರೆ.
39 ಮಂದಿ ಸಾವು, 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. 48 ಮಂದಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ. ಇದನ್ನೂ ಓದಿ: Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ