ಹಿಂದೂ ಧರ್ಮ, ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ಮಂಗಳೂರು ಯುವತಿ ಕೆಲಸದಿಂದಲೇ ವಜಾ

Public TV
1 Min Read

– ಆಸ್ಪತ್ರೆಯೊಂದರಲ್ಲಿ ಡಯೆಟಿಷಿಯನ್‌ ಆಗಿದ್ದ ಯುವತಿ
– ನಾನು ಭಾರತೀಯಳು.. ಹೌದು ಭಾರತವನ್ನು ದ್ವೇಷಿಸುತ್ತೇನೆಂದು ಪೋಸ್ಟ್‌ ಹಾಕಿದ್ದ ಡಯೆಟಿಷಿಯನ್‌

ಮಂಗಳೂರು: ಹಿಂದೂಗಳು ಹಾಗೂ ದೇಶ ವಿರೋಧಿ ಪೋಸ್ಟ್‌ ಹಾಕಿ ಮಂಗಳೂರಿನ ಡಯೆಟಿಷಿಯನ್‌ವೊಬ್ಬರು ವಿವಾದಕ್ಕೆ ಗುರಿಯಾಗಿದ್ದಾರೆ. ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯೆಟಿಷಿಯನ್‌ ಆಗಿ ಅಫೀಫ ಫಾರೀಮಾ, ಸೋಷಿಯಲ್‌ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್‌ ಹಾಕಿದ್ದರು. ‘help stinky hindus are behind me’ (ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ). am i indian? yes. do i hate india? yes (ಹೌದು, ನಾನು ಭಾರತೀಯಳು.. ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ) ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್‌’ ಅಂತ ಕೂಗಿದ ಜಿಪ್‌ಲೈನ್‌ ಆಪರೇಟರ್‌

ಅಫೀಫ ವಿವಾದಾತ್ಮಕ ಪೋಸ್ಟ್ ವಿರುದ್ಧ ಭಾರೀ ಆಕ್ರೋಶ ಭುಗಿಲೆದ್ದಿತ್ತು. ಆಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆಕ್ರೋಶ‌ ಭುಗಿಲೇಳುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆಯ ಆಡಳಿತ ಮಂಡಳಿ, ಅಫೀಫಳನ್ನು ಕೆಲಸದಿಂದ ವಜಾ ಮಾಡಿದೆ.

ವಿವಾದಾತ್ಮಕ ಪೋಸ್ಟ್ ವಿಚಾರ ಅಫೀಫ ವಿರುದ್ಧ ಮಂಗಳೂರು ಪೊಲೀಸರು FIR ದಾಖಲಿಸಿದ್ದಾರೆ. ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಆಸ್ಪತ್ರೆಯ ಹೆಚ್‌ಆರ್ ಅಧಿಕಾರಿ ಮಹಮ್ಮದ್ ಅಸ್ಲಾಂ ಅವರಿಂದ ಅಫೀಫ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ನೀಡಿದ ಹಿನ್ನೆಲೆಯಲ್ಲಿ ಅಫೀಫ ವಿರುದ್ಧ BNS ಕಲಂ 196 (1) (a), 353 (2) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ನಾವು ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ: ಟರ್ಕಿ ಸ್ಪಷ್ಟನೆ

Share This Article