ಬಿಗ್‌ಬಾಸ್ ಕನ್ನಡ ಸೀಸನ್ (Bigg Boss Kannada) 12 ಆರಂಭಗೊಂಡ ಮೊದಲ ದಿನವೇ ಔಟಾಗಿದ್ದ ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshita Shetty) ರೀ ಎಂಟ್ರಿ ಕೊಟ್ಟಿದ್ದಾರೆ.
ರಕ್ಷಿತಾ ಶೆಟ್ಟಿ ರೀ ಎಂಟ್ರಿ ಕೊಟ್ಟಿರುವ ಪ್ರೋಮೋ ಸದ್ಯ ರಿಲೀಸ್ ಆಗಿದ್ದು, ವಿಡಿಯೋದಲ್ಲಿ ಕಿಚ್ಚ ಸುದೀಪ್ (Kichcha Sudeep) ರಕ್ಷಿತಾ ಅವರನ್ನು ಮತ್ತೆ ಬಿಗ್‌ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತೆ ಹೋಗಿ ಏನು ಮಾಡ್ತೀರಾ ಎಂದು ಕೇಳಿದ ಸುದೀಪ್‌ಗೆ ರಕ್ಷಿತಾ, ಎಲ್ಲರ ಹತ್ತಿರ ಪ್ರಾಪರ್ ರೀಸನ್ ಕೇಳ್ತಿನಿ. ಆವತ್ತು ಎಲ್ಲರೂ ಸಮಾಧಾನ ಮಾಡಿದ್ದರು. ಆದರೆ ಯಾರು ನನ್ನ ಜೊತೆ ನಿಲ್ಲಲಿಲ್ಲ. ನಾನು ಹೇಗೆ ಅಂತ ಗೊತ್ತಿಲ್ಲದೇ ಕವರ್ ನೋಡಿ ನನ್ನನ್ನು ಜಡ್ಜ್ ಮಾಡಿದರು. ನನಗೆ ಆ ಯೋಗ್ಯತೆ ಇದೆ ಎಂದು ಹೇಳಿ, ಕಿಚ್ಚಿನೊಂದಿಗೆ ಬಿಗ್‌ಬಾಸ್ ಮನೆಗೆ ಮರಳಿದ್ದಾರೆ.
View this post on Instagram
ಒಂದು ವಾರ ಮನೆಯಿಂದ ಹೊರಗುಳಿದಿದ್ದ ರಕ್ಷಿತಾ ಎಲ್ಲ ಸ್ಪರ್ಧಿಗಳ ನಡವಳಿಕೆ ತಿಳಿದು ಇದೀಗ ಸ್ಟ್ರಾಂಗ್ ಸ್ಪರ್ಧಿಯಾಗಿ ರೀ ಎಂಟ್ರಿಕೊಡುವ ಮೂಲಕ ಸ್ಪರ್ಧಿಗಳಿಗೆ ಬಿಗ್‌ಶಾಕ್ ನೀಡಿದ್ದಾರೆ.ಇದನ್ನೂ ಓದಿ: ಮೊದಲ ದಿನವೇ ಮನೆಯಿಂದ ಔಟ್ – ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿಗೆ ಗೇಟ್‌ಪಾಸ್
ಬಿಗ್ ಬಾಸ್ ಮನೆಗೆ ಮರಳಿಬಂದಳು ರಕ್ಷಿತಾ
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/X6cFlWGWA2
— Colors Kannada (@ColorsKannada) October 4, 2025
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 ಸೆ.28ರಂದು ಪ್ರಾರಂಭವಾಗಿತ್ತು. ಒಟ್ಟು 19 ಸ್ಪರ್ಧಿಗಳ ಪೈಕಿ 6 ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ 3 ಸ್ಪರ್ಧಿಗಳು ಅತಂತ್ರರಾಗಿ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಸ್ಪಂದನಾ ಅತಂತ್ರ ಸ್ಥಿತಿಯಲ್ಲಿ ಇದ್ದರು. ಮನೆಯಲ್ಲಿ ಅತಂತ್ರರಾಗಿದ್ದ ಮೂವರಲ್ಲಿ ಇಬ್ಬರನ್ನು ಉಳಿಸಿ, ಒಬ್ಬರನ್ನು ಹೊರಗೆ ಕಳಿಸುವಂತೆ ಬಿಗ್‌ಬಾಸ್ ಸೂಚಿಸಿದ್ದರು. ಹೊರಗೆ ಕಳುಹಿಸುವ ನಿರ್ಧಾರವನ್ನು 6 ಒಂಟಿಗಳಿಗೆ ನೀಡಲಾಗಿತ್ತು. ಅದರಂತೆ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಿದ್ದರು.ಇದನ್ನೂ ಓದಿ: ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು