– ಜನಪರ ಹಾಡಿನ ಮೂಲಕ ನಾಟಕ ತಂಡದ ಪ್ರಚಾರಕ್ಕೂ ನವೀನ ಪ್ರಯತ್ನ
ಮಂಗಳೂರು: ಮನಸ್ಸಿದ್ದರೆ ಮಾರ್ಗ ಕಂಡುಕೊಳ್ಳಬಹುದು ಎಂಬುದಕ್ಕೆ ಈ ಮಂಗಳೂರಿನ (Mangaluru) ಯುವಕರು ಜೀವಂತ ಉದಾಹರಣೆ. ನಾಟಕದ ಆಸಕ್ತಿಯಿಂದ ಒಟ್ಟಾಗಿ ಬಂದ ಈ ತಂಡ, ಈಗ ಮೊಳಕೆ ಕಾಳಿನ ವ್ಯಾಪಾರ ಆರಂಭಿಸಿ ಜನರ ಮನಸೆಳೆಯುತ್ತಿದ್ದಾರೆ.
ಕದ್ರಿಯ ಪಾರ್ಕ್ ಬಳಿ ತಮ್ಮ ಸ್ಟಾಲ್ ಇಟ್ಟಿರುವ ಈ ತಂಡ, ಪೌಷ್ಟಿಕತೆ ತುಂಬಿರುವ ಮೊಳಕೆ ಕಾಳುಗಳನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಆರೋಗ್ಯದ ಅರಿವು ಕೂಡ ಮೂಡಿಸುತ್ತಿದ್ದಾರೆ. ಕೇವಲ ವ್ಯಾಪಾರವಲ್ಲ, ತಮ್ಮ ನಾಟಕ ತಂಡವನ್ನು ಜನತೆಗೆ ಪರಿಚಯಿಸುವ ಪ್ರಯತ್ನದಲ್ಲೂ ಇವರು ನಿರತನಾಗಿದ್ದಾರೆ. ವಿಶೇಷವೆಂದರೆ ಜನಪರ ಹಾಡುಗಳ ಮೂಲಕ ತಮ್ಮ ತಂಡದ ಪ್ರಚಾರವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಕಾರಂಜಿ ಕೆರೆಯಲ್ಲಿ ಮತ್ಸ್ಯಾಗಾರ ಬದಲಿಗೆ ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಮುಂದಾದ ಸರ್ಕಾರ
ಈ ಉತ್ತಮ ಹಾದಿಗೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ಯುವಕರು ನವೀನ ಮಾರ್ಗದಲ್ಲಿ ಉದ್ದಿಮೆ ಆರಂಭಿಸಿ, ಕಲಾ ಪ್ರಚಾರಕ್ಕೂ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ.