ಚಿಕಿತ್ಸೆಗೆಂದು ಕರ್ಕೊಂಡು ಬಂದು ಆಸ್ಪತ್ರೆಯಲ್ಲೇ ಯುವತಿಯ ರೇಪ್‌ ಮಾಡಿದ!

Public TV
1 Min Read

ಮಂಗಳೂರು: ಚಿಕಿತ್ಸೆಗೆಂದು ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪರಿಚಯಸ್ಥನೇ ಆಸ್ಪತ್ರೆಯಲ್ಲಿ ನಿರಂತರ ಅತ್ಯಾಚಾರ ಎಸಗಿದ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

ಕೇರಳ (Kerala) ಮೂಲದ ಸಜಿತ್ ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೈಲ್ಸ್ ಗೆ ಚಿಕಿತ್ಸೆಗೆ ಯುವತಿಯನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಸಜಿತ್, ಚಿಕಿತ್ಸೆಯ ಬಳಿಕ ಆಸ್ಪತ್ರೆಯ ಕೊಠಡಿಯಲ್ಲಿದ್ದ ವೇಳೆ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ನಗ್ನ ಫೋಟೋಗಳನ್ನ ತೆಗೆದಿದ್ದು, ಬೆದರಿಕೆ ಹಾಕುತ್ತಿದ್ದ.

ಆ ಬಳಿಕ ನಗ್ನ ಫೋಟೋ ಇದೆ ಎಂದು ಬೆದರಿಸಿ, ಆಕೆಯನ್ನು ಮಂಗಳೂರಿನ ಮಹಾರಾಜ ಹೋಟೇಲ್ ಗೆ ಕರೆಸಿಕೊಂಡು‌ ಅಲ್ಲಿನ ಕೊಠಡಿಯಲ್ಲಿ ಅತ್ಯಾಚಾರ ನಡೆಸಿದ್ದಾನೆ. ಅದಾದ ಬಳಿಕ ಯುವತಿ ಫುಡ್ ಫಾಯಿಸನ್ ಆಗಿ ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾದಾಗ ಅಲ್ಲೂ ಕೊಠಡಿಯಲ್ಲಿ ಅತ್ಯಾಚಾರ ಮಾಡಿದ್ದಾನೆಂದು ಯುವತಿ‌ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಕದ್ರಿ ಪೊಲೀಸರು (Kadri Police) ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ವರ್ತೆ ಪಂಜುರ್ಲಿ ಅಭಯ ನಿಜವಾಯ್ತು- ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು!

Share This Article