ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ (Mangaluru Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೈಯ್ಯದ್ ಯಾಸೀನ್‌ನ ಬ್ಯಾಂಕ್ ಖಾತೆ ಸೀಜ್ ಮಾಡಲಾಗಿದೆ.
ಘಟನೆ ಸಂಬಂಧ ಇ.ಡಿ (ED) ಪಿಎಂಎಲ್‌ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. 2022ರ ನವೆಂಬರ್ 19 ರಂದು ಮಂಗಳೂರಿನ ಕಂಕನಾಡಿ (Kankanady) ಬಳಿ ಆಟೋರಿಕ್ಷಾದಲ್ಲಿ ಐಇಡಿ (IED) ಬಾಂಬ್ ಸ್ಪೋಟಿಸಲಾಗಿತ್ತು. ಈ ಬಗ್ಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿತ್ತು. ಆಟೋರಿಕ್ಷಾ ಚಾಲಕ ಪುರುಷೋತ್ತಮ ನೀಡಿದ ದೂರಿನನ್ವಯ ಎಫ್‌ಐಆರ್ ಆಗಿತ್ತು. ಪ್ರಕರಣವನ್ನ ಎಕ್ಸ್‌ಪ್ಲೋಸಿವ್ ಸಬ್‌ಸ್ಟಾನ್ಸ್ ಆಕ್ಟ್ ಅಡಿ ಎನ್‌ಐಎ ಕೈಗೆತ್ತಿಕೊಂಡು ತನಿಖೆ ನಡೆಸಿತ್ತು. ಪಿಎಂಎಲ್‌ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ಇದನ್ನೂ ಓದಿ: ನ.1ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಗಳ ಚುನಾವಣೆಗೆ ಪೂರ್ವಸಿದ್ಧತೆ: ಡಿಕೆಶಿ
ಮಂಗಳೂರಿನಲ್ಲಿ ಆಟೋರಿಕ್ಷಾ ಬ್ಲಾಸ್ಟ್ ಮಾಡೋದು ಐಸಿಸ್ ಉಗ್ರ ಸಂಘಟನೆಯ ಪ್ಲಾನ್ ಆಗಿತ್ತು. ಉಗ್ರ ಸಂಘಟನೆಯನ್ನ ಭಾರತದಾದ್ಯಂತ ವಿಸ್ತರಿಸುವುದು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದು ಐಸಿಸ್ ಸಂಘಟನೆ ಗುರಿಯಾಗಿತ್ತು. ಐಸಿಸ್‌ನ ಹ್ಯಾಂಡ್ಲರ್‌ಗಳಿಗೆ ಆನ್ಲೈನ್‌ನಲ್ಲಿ ಟೆಲಿಗ್ರಾಂ ಆಪ್ ಮೂಲಕ ತರಬೇತಿ ನೀಡಲಾಗ್ತಿತ್ತು. ಪ್ರಮುಖ ಆರೋಪಿ ಮಹಮದ್ ಶಾರೀಕ್ @ ಪ್ರೇಮ್ ರಾಜ್ ಇತರೆ ಆರೋಪಿಗಳಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ. 2.68 ಲಕ್ಷ ಹಣವನ್ನ ಕ್ರಿಪ್ಟೋ ಕರೆನ್ಸಿ ಏಜೆಂಟ್ಸ್ಗಳ ಮೂಲಕ ಶಾರೀಕ್ ತಲುಪಿಸಿದ್ದ. ಈ ಹಣದ ಮೂಲಕ ಆನ್ಲೈನ್‌ನಲ್ಲಿ ಐಇಡಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿ ಖರೀದಿಸಲಾಗಿತ್ತು. ಕರ್ನಾಟಕದ ಮೈಸೂರು ಕೇರಳ ತಮಿಳುನಾಡಿನಲ್ಲೂ ಐಇಡಿ ಬಾಂಬ್ ಇಡಲು ಪ್ಲಾನ್ ಮಾಡಿದ್ದರು. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಬಳಿಯಲ್ಲೂ ಬ್ಲಾಸ್ಟ್ ಮಾಡುವ ಪ್ಲಾನ್ ಮಾಡಿದ್ದರು. ಪ್ರಮುಖ ಆರೋಪಿ ಮಾಜ್, ಮುನೀರ್ ಕ್ರಿಪ್ಟೋ ಕರೆನ್ಸಿಯನ್ನ ಏಜೆಂಟ್ಸ್ ಮೂಲಕ ಮಹಮ್ಮದ್ ಶಾರೀಕ್‌ಗೆ ತಲುಪಿಸಿದ್ದ ಎಂದು ಜಾರಿ ನಿರ್ದೇಶನಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕರ್ತವ್ಯ ಭವನ ಉದ್ಘಾಟಿಸಿದ ಮೋದಿ – ವಿಶೇಷತೆಗಳೇನು?