ಇನ್ಮೇಲೆ ಇಂದಿರಾ ಕ್ಯಾಂಟೀನ್‍ನಲ್ಲಿ ಸಿಗುತ್ತೆ ಮಂಗಳೂರು ಬನ್ಸ್- ದರದಲ್ಲೂ ಬದಲಾವಣೆ

Public TV
1 Min Read

ಬೆಂಗಳೂರು: ಇಂದಿರಾ ಕ್ಯಾಂಟೀನ್‍ನನ್ನು ಹೊಸ ರೂಪದಲ್ಲಿ ತರೋಕೆ ಕಾಂಗ್ರೆಸ್ ಸರ್ಕಾರ (Congress Government) ಹೊರಟಿದೆ. ಈಗಾಗ್ಲೇ ಮೆನು, ದರದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.

ಇದೀಗ ಇಂದಿರಾ ಕ್ಯಾಂಟೀನ್‍ (Indira Canteen) ನಲ್ಲಿ ಹೊಸ ಐಟಂಗಳ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ ತಿಂಡಿ ಮೆನುಗೆ ಬ್ರೆಡ್ ಜಾಮ್ (Bread Jam) ಮತ್ತು ಮಂಗಳೂರು ಬನ್ಸ್ (Mangaluru Buns) ಸೇರ್ಪಡೆಯಾಗಲಿದೆ. ಮಧ್ಯಾಹ್ನದ ಊಟಕ್ಕೆ ಮುದ್ದೆ, ಸೊಪ್ಪು ಸಾರು ನೀಡಲು ತಿರ್ಮಾನ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಹಿ ಅಂದ್ರೆ ಪಾಯಸ ನೀಡಲು ಬಿಬಿಎಂಪಿ ಚಿಂತನೆ ಮಾಡಿದೆ. ಇದನ್ನೂ ಓದಿ: ಸಿಎಂ ಅವ್ರೇ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ- 2018ರ ಪಬ್ಲಿಕ್ ಟಿವಿ ವರದಿ ತೆಗೆದು ಸರ್ಕಾರಕ್ಕೆ ತಿವಿದ ಯತ್ನಾಳ್

ದಿನ ಬಿಟ್ಟು ದಿನ ಮುದ್ದೆ ಊಟ ಒದಗಿಸುವ ಕುರಿತು ನಿರ್ಧಾರ ಮಾಡಲಾಗಿದೆ. ಮುದ್ದೆ ಇಲ್ಲದ ದಿನ ಚಪಾತಿ ಸಾಗು ಊಟ ನೀಡಲು ರೆಡಿಯಾಗಿದೆ. ಊಟ ಒದಗಿಸುವ ಏಜೆನ್ಸಿಗಳು ಫೈನಲ್ ಆಗುತ್ತಿದ್ದಂತೆ ಹೊಸ ಮೆನು ಜಾರಿಗೆ ಬರಲಿದೆ. ಬೆಳಗಿನ ತಿಂಡಿ 5 ರೂಪಾಯಿ ಇತ್ತು 10 ರೂಗೆ ಏರಿಕೆ ಆಗಲಿದೆ. ಮಧ್ಯಾಹ್ನ ಊಟಕ್ಕೆ 10 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

Share This Article