ಮಂಗಳೂರು: ಕಾಂಗ್ರೆಸ್ ಮುಖಂಡರೊಬ್ಬರ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೇರಮಜಲು ಎಂಬಲ್ಲಿ ನಡೆದಿದೆ.
ಮೇರಮಜಲು ಗ್ರಾಪಂ ಸದಸ್ಯ, ಕಾಂಗ್ರೆಸ್ ಮುಖಂಡ ಯೋಗೀಶ್ ಪ್ರಭು ಹತ್ಯೆಗೆ ಯತ್ನಿಸಲಾಗಿದೆ. ಕೊಲೆ ಯತ್ನಕ್ಕೆ ಕಾರಣವೇನು ಎಂಬುದಾಗಿ ತಿಳಿದುಬಂದಿಲ್ಲ.
ಸ್ಥಳೀಯ ರೌಡಿಶೀಟರ್ ಪ್ರಸಾದ್ ಬೆಳ್ಚಡ ತಂಡ ತಡರಾತ್ರಿ ಏಕಾಏಕಿ ಯೋಗೀಶ್ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಈ ವೇಳೆ ಹಲ್ಲೆ ತಡೆಯಲು ಬಂದ ಪತ್ನಿ ಶೋಭಾ ಮೇಲೂ ಹಲ್ಲೆಯಾಗಿದೆ. ಘಟನೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಯೋಗೀಶ್ ಹಾಗೂ ಗಾಯಗೊಂಡ ಪತ್ನಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.